ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೇ ವಾರದಲ್ಲಿ 3 ಕೋಟಿಗೂ ಅಧಿಕ ದಂಡ ವಸೂಲಿ - Karavali Times ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೇ ವಾರದಲ್ಲಿ 3 ಕೋಟಿಗೂ ಅಧಿಕ ದಂಡ ವಸೂಲಿ - Karavali Times

728x90

1 December 2020

ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೇ ವಾರದಲ್ಲಿ 3 ಕೋಟಿಗೂ ಅಧಿಕ ದಂಡ ವಸೂಲಿ



ಬೆಂಗಳೂರು, ಡಿ. 01, 2020 (ಕರಾವಳಿ ಟೈಮ್ಸ್) : ಕೊರೋನಾ ಹಾಗೂ ಲಾಕ್‍ಡೌನ್ ಕಾರಣದಿಂದ ಸುಮ್ಮನಾಗಿದ್ದ ಟ್ರಾಫಿಕ್ ಪೊಲೀಸರು ಇದೀಗ ಮತ್ತೆ ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬೆಂಗಳೂರು ಟ್ರಾಫಿಕ್ ಪೆÇಲೀಸರು ಒಂದೇ ವಾರದಲ್ಲಿ 3 ಕೋಟಿಗೂ ಮೀರಿದ ಭಾರಿ ಮೊತ್ತದ ದಂಡ ವಸೂಲಿ ಮಾಡಿರುವ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.

ನವೆಂಬರ್ ಕೊನೆಯ ವಾರದಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದಂಡವನ್ನು ಸಂಚಾರಿ ಪೆÇಲೀಸರು ಸಂಗ್ರಹಿಸಿದ್ದಾರೆ. ನ. 23 ರಿಂದ 29 ರ ನಡುವಿನ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬರೋಬ್ಬರಿ 79,359 ಪ್ರಕರಣಗಳನ್ನು ದಾಖಲಿಸಿರುವ ನಗರ ಟ್ರಾಫಿಕ್ ಪೆÇಲೀಸರು 3 ಕೋಟಿ 34 ಲಕ್ಷದ 89 ಸಾವಿರದ 300 ರೂಪಾಯಿ (3,34,89,300/-) ದಂಡ ಸಂಗ್ರಹ ಮಾಡಿದ್ದಾರೆ. 

ಹೆಲ್ಮೆಟ್ ರಹಿತ ಚಾಲನೆಯ 26,118 ಪ್ರಕರಣ, ಸಿಗ್ನಲ್ ನಿಯಮ ಉಲ್ಲಂಘನೆಯ ಬಗ್ಗೆ 8,635 ಪ್ರಕರಣ ಹಾಗೂ ನೋ ಎಂಟ್ರಿ ಬಗ್ಗೆ 3,877 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿಯಮ ಮೀರಿದ ವಾಹನ ಸವಾರರಿಗೆ ಚಳಿ ಹಿಡಿಸಿದ್ದಾರೆ. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವುದನ್ನು ಕಳೆದ ಮಾರ್ಚ್‍ನಿಂದ ಪೊಲೀಸರು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಲಾಕ್‍ಡೌನ್ ಸಡಿಲಿಕೆಯ ಬಳಿಕ ವಾಹನ ಓಡಾಟ ಹೆಚ್ಚಾದ ಹಿನ್ನಲೆಯಲ್ಲಿ ಮತ್ತೆ ಪೊಲೀಸರು ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರ ಕಾರ್ಯಾಚರಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ.









  • Blogger Comments
  • Facebook Comments

0 comments:

Post a Comment

Item Reviewed: ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ಒಂದೇ ವಾರದಲ್ಲಿ 3 ಕೋಟಿಗೂ ಅಧಿಕ ದಂಡ ವಸೂಲಿ Rating: 5 Reviewed By: karavali Times
Scroll to Top