ಮೇ 24 ರಿಂದ ಜೂ 10 ರವರೆಗೆ ಪಿಯುಸಿ ಪರೀಕ್ಷೆ : ತಾತ್ಕಾಲಿಕ ವೇಳಾಪಟ್ಟಿ ಘೋಷಿಸಿದ ಸಚಿವ ಸುರೇಶ್ ಕುಮಾರ್ - Karavali Times ಮೇ 24 ರಿಂದ ಜೂ 10 ರವರೆಗೆ ಪಿಯುಸಿ ಪರೀಕ್ಷೆ : ತಾತ್ಕಾಲಿಕ ವೇಳಾಪಟ್ಟಿ ಘೋಷಿಸಿದ ಸಚಿವ ಸುರೇಶ್ ಕುಮಾರ್ - Karavali Times

728x90

29 January 2021

ಮೇ 24 ರಿಂದ ಜೂ 10 ರವರೆಗೆ ಪಿಯುಸಿ ಪರೀಕ್ಷೆ : ತಾತ್ಕಾಲಿಕ ವೇಳಾಪಟ್ಟಿ ಘೋಷಿಸಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು, ಜ. 29, 2021 (ಕರಾವಳಿ ಟೈಮ್ಸ್) : ನಿನ್ಮೆಯಷ್ಟೆ ಈ ಬಾರಿಯ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ತಾತ್ಕಾಲಿಕ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಘೋಷಣೆ ಮಾಡಿದ್ದ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಮೇ 24 ರಿಂದ ಜೂನ್ 10 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಮೇ 24 ರಂದು ಭೌತಶಾಸ್ತ್ರ, ಇತಿಹಾಸ, ಮೇ 25 ರಂದು ಮೈನಾರಿಟಿ ಲ್ಯಾಂಗ್ವೇಜಸ್, ಮೇ 26 ರಂದು ಮೂಲ ಗಣಿತ, ಲಾಜಿಕ್ ಹೋಮ್ ಸೈನ್ಸ್, 27 ರಂದು ಗಣಿತ, ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಮೇ 28 ರಂದು ಉರ್ದು, ಮೇ 29 ರಂದು ರಾಜ್ಯಶಾಸ್ತ್ರ, ಮೇ 31 ರಂದು ರಸಾಯನ ಶಾಸ್ತ್ರ, ಜೂನ್ 1 ರಂದು ಕರ್ನಾಟಕ ಸಂಗೀತ, ಜೂನ್ 2 ರಂದು ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜೂನ್ 3 ರಂದು ಹಿಂದಿ, ಜೂನ್ 4 ರಂದು ಅರ್ಥಶಾಸ್ತ್ರ, ಜೂನ್ 5 ರಂದು ಕನ್ನಡ (ಪ್ರಥಮ ಭಾಷೆ), ಜೂನ್ 7 ರಂದು ಇಂಗ್ಲಿಷ್ (ದ್ವಿತೀಯ ಭಾಷೆ) ಹಾಗೂ ಜೂನ್ 10 ರಂದು ಭೂಗೋಳಶಾಸ್ತ್ರ ಪರೀಕ್ಷೆಗಳು ನಡೆಯಲಿವೆ ಎಂದವರು ಘೋಷಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮೇ 24 ರಿಂದ ಜೂ 10 ರವರೆಗೆ ಪಿಯುಸಿ ಪರೀಕ್ಷೆ : ತಾತ್ಕಾಲಿಕ ವೇಳಾಪಟ್ಟಿ ಘೋಷಿಸಿದ ಸಚಿವ ಸುರೇಶ್ ಕುಮಾರ್ Rating: 5 Reviewed By: karavali Times
Scroll to Top