ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ - Karavali Times ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ - Karavali Times

728x90

16 January 2021

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ

ಬಂಟ್ವಾಳ, ಜ. 16, 2021 (ಕರಾವಳಿ ಟೈಮ್ಸ್) : ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಪಾಣೆಮಂಗಳೂರು ತರುಣ್ ಪ್ರಿಂಟರ್ಸ್ ಮಾಲಕ ವಿದ್ಯಾಧರ್ ಜೈನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಎಸೋಸಿಯೇಶನ್ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಕಲ್ಲಡ್ಕ ಕಲಾ ಮುದ್ರಣದ ಮಾಲಕ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ವಗ್ಗ ನಮನ ಪ್ರಿಂಟರ್ಸ್ ಮಾಲಕ ಪ್ರಶಾಂತ್ ಎಚ್. ಕುದ್ಪಾಡಿ, ಕೋಶಾಧಿಕಾರಿಯಾಗಿ ಬಿ.ಸಿ.ರೋಡು ವಂಶ ಪ್ರಿಂಟರ್ಸ್ ಮಾಲಕ ಯಾದವ ಕುಲಾಲ್ ಅಗ್ರಬೈಲು, ಜೊತೆ ಕಾರ್ಯದರ್ಶಿಯಾಗಿ ದರಿಬಾಗಿಲು ಬ್ರಹ್ಮಶ್ರೀ ಪ್ರಿಂಟರ್ಸ್ ಮಾಲಕ ಮಾಧವ ಅವರು ಅಯ್ಕೆಯಾಗಿದ್ದಾರೆ ಎಂದು ಎಸೋಸಿಯೇಶನ್ ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ವಿದ್ಯಾಧರ ಜೈನ್ ಆಯ್ಕೆ Rating: 5 Reviewed By: karavali Times
Scroll to Top