ತಾಯಿಯ ಚಿಂತಾಜನಕ ಸ್ಥಿತಿಗೆ ಮರುಗಿ ಮಗ ನದಿಗೆ ಹಾರಿ ಆತ್ಮಹತ್ಯೆ - Karavali Times ತಾಯಿಯ ಚಿಂತಾಜನಕ ಸ್ಥಿತಿಗೆ ಮರುಗಿ ಮಗ ನದಿಗೆ ಹಾರಿ ಆತ್ಮಹತ್ಯೆ - Karavali Times

728x90

8 February 2021

ತಾಯಿಯ ಚಿಂತಾಜನಕ ಸ್ಥಿತಿಗೆ ಮರುಗಿ ಮಗ ನದಿಗೆ ಹಾರಿ ಆತ್ಮಹತ್ಯೆ

ಬಂಟ್ವಾಳ, ಫೆ. 09, 2021 (ಕರಾವಳಿ ಟೈಮ್ಸ್) : ತಾಲೂಕಿನ ಕೊಡಾಜೆ ಸಮೀಪದ ಪಂತಡ್ಕ ನಿವಾಸಿ ನೀರಜ್ ಯಾನೆ ನೀಲು (30) ಎಂಬಾತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಸ್ಥಿತಿಗೆ ಮರುಗಿ, ಭಾವನಾತ್ಮಕ ಸಂದೇಶಗಳನ್ನು ವಾಟ್ಸಪ್ ಸ್ಟೇಟಸ್‍ಗೆ ಹಾಕಿ ಬಳಿಕ ಸೋಮವಾರ ರಾತ್ರಿ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೀರಜ್ ತಾಯಿ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದಲೇ ಮನನೊಂದಿರುವ ಈತ ತನ್ನ ಮೊಬೈಲ್ ವಾಟ್ಸಪ್ ಸ್ಟೇಟಸ್‍ನಲ್ಲಿ ಕೆಲವೊಂದು ಭಾವನಾತ್ಮಕ ಸಂದೇಶಗಳನ್ನು ಬರೆದುಕೊಂಡಿದ್ದಾನೆ. ಬಳಿಕ ನೇರವಾಗಿ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯ ಈಜುಪಟು ಯುವಕರು ಹಾಗೂ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.
  • Blogger Comments
  • Facebook Comments

1 comments:

  1. ಹಣದ ಕೊರತೆ ಇದ್ದಿರಬಹುದು....

    ReplyDelete

Item Reviewed: ತಾಯಿಯ ಚಿಂತಾಜನಕ ಸ್ಥಿತಿಗೆ ಮರುಗಿ ಮಗ ನದಿಗೆ ಹಾರಿ ಆತ್ಮಹತ್ಯೆ Rating: 5 Reviewed By: karavali Times
Scroll to Top