ಕಲ್ಲಡ್ಕದಲ್ಲಿ ಗ್ಯಾಸ್ ಟ್ಯಾಂಕರ್-ಕಂಟೈನರ್ ನಡುವೆ ಅಪಘಾತ : ಹೆದ್ದಾರಿ ಸಂಚಯ ವ್ಯತ್ಯಯ - Karavali Times ಕಲ್ಲಡ್ಕದಲ್ಲಿ ಗ್ಯಾಸ್ ಟ್ಯಾಂಕರ್-ಕಂಟೈನರ್ ನಡುವೆ ಅಪಘಾತ : ಹೆದ್ದಾರಿ ಸಂಚಯ ವ್ಯತ್ಯಯ - Karavali Times

728x90

3 February 2021

ಕಲ್ಲಡ್ಕದಲ್ಲಿ ಗ್ಯಾಸ್ ಟ್ಯಾಂಕರ್-ಕಂಟೈನರ್ ನಡುವೆ ಅಪಘಾತ : ಹೆದ್ದಾರಿ ಸಂಚಯ ವ್ಯತ್ಯಯ

ಬಂಟ್ವಾಳ, ಫೆ. 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕದಲ್ಲಿ ಅನಿಲ ಟ್ಯಾಂಕರ್ ಹಾಗೂ ಕಂಟೈನರ್ ವಾಹನಗಳ ಮಧ್ಯೆ ಬುಧವಾರ ರಾತ್ರಿ ಅಪಘಾತ ಸಂಭವಿಸಿದ ಪರಿಣಾಮ‌ ಕೆಲ ಕಾಲ ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿತು. ಬೆಂಗಳೂರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ಅಜಾಗರೂಕತೆ ಪರಿಣಾಮ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಎದುರಿನಿಂದ ಬರುತ್ತಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಯಿಂದ ಎರಡೂ ವಾಹನಗಳಿಗೆ ಹಾನಿ ಉಂಟಾಗಿದ್ದು ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. ಅಪಘಾತದಿಂದ ರಸ್ತೆ ಮಧ್ಯೆ ಗ್ಯಾಸ್ ಟ್ಯಾಂಕರ್ ನಿಂತ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕದಲ್ಲಿ ಗ್ಯಾಸ್ ಟ್ಯಾಂಕರ್-ಕಂಟೈನರ್ ನಡುವೆ ಅಪಘಾತ : ಹೆದ್ದಾರಿ ಸಂಚಯ ವ್ಯತ್ಯಯ Rating: 5 Reviewed By: karavali Times
Scroll to Top