ಮಾರ್ಚ್ 2 ರಂದು ಬಂಟ್ವಾಳದಲ್ಲಿ ಸಿಂಗರ್ಸ್ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರ - Karavali Times ಮಾರ್ಚ್ 2 ರಂದು ಬಂಟ್ವಾಳದಲ್ಲಿ ಸಿಂಗರ್ಸ್ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರ - Karavali Times

728x90

23 February 2021

ಮಾರ್ಚ್ 2 ರಂದು ಬಂಟ್ವಾಳದಲ್ಲಿ ಸಿಂಗರ್ಸ್ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರ

ಬಂಟ್ವಾಳ, ಫೆ. 23, 2021 (ಕರಾವಳಿ ಟೈಮ್ಸ್) : ಎಸ್.ಪಿ.ಎಲ್. ಮಂಗಳೂರು ಇದರ ಆಶ್ರಯದಲ್ಲಿ ಸಿಂಗರ್ಸ್ ಮ್ಯೂಸಿಕ್ ಪ್ರೀಮಿಯರ್ ಲೀಗ್ (ಎಸ್.ಪಿ.ಎಲ್.)-2021 ಸೀಸನ್-1 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮಾರ್ಚ್ 2 ರಂದು ಮಂಗಳವಾರ ಬಂಟ್ವಾಳ-ಬಸ್ತಿಪಡ್ಪುವಿನ ಮೇಲಾಂಟ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೇರಳ ಹಾಗೂ ಕರ್ನಾಟಕದ ಆಟಗಾರರು ಈ ಟೂರ್ನಮೆಂಟಿನಲ್ಲಿ ಭಾಗವಹಿಸಲಿದ್ದು, ಆಹ್ವಾನಿತ 5 ತಂಡಗಳ 11 ಜನರ ಕ್ರಿಕೆಟ್ ಟೂರ್ನಮೆಂಟ್ ಇದಾಗಿರುತ್ತದೆ. ವಿಜೇತ ತಂಡಗಳಿಗೆ ಪ್ರಥಮ 10,001/-, ದ್ವಿತೀಯ 5,001/- ನಗದು ಹಾಗೂ ಎಸ್.ಪಿ.ಎಲ್. ಟ್ರೋಫಿ ಮತ್ತು ಉತ್ತಮ ಎಸೆತಗಾರ, ಉತ್ತಮ ದಾಂಡುಗಾರ, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಮೊದಲಾದ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964215983, 7996677172, 8105292587, 8296093086, 8861513440, 7349141117 ಅಥವಾ 9164535847ನ್ನು ಸಂಪರ್ಕಿಸಬಹುದು. ಪಂದ್ಯಾಟದ ಪ್ರಯುಕ್ತ ಅದೇ ದಿನ ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಹಾಗೂ ಸಿಂಗರ್ಸ್ ಪ್ರೀಮಿಯರ್ ಲೀಗ್ ಇವುಗಳ ಜಂಟಿ ಆಶ್ರಯದಲ್ಲಿ ನಾಗರಿಕರ ಸಹಕಾರದೊಂದಿಗೆ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ (ರಿ) ಸಂಸ್ಥೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ ಎಂದು ಎಸ್.ಪಿ.ಎಲ್. ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮಾರ್ಚ್ 2 ರಂದು ಬಂಟ್ವಾಳದಲ್ಲಿ ಸಿಂಗರ್ಸ್ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರ Rating: 5 Reviewed By: karavali Times
Scroll to Top