ಮಂಗಳೂರು ಜೇಸಿಐ ದಿಶಾ ವತಿಯಿಂದ ಮಹಿಳಾ ದಿನಾಚರಣೆ - Karavali Times ಮಂಗಳೂರು ಜೇಸಿಐ ದಿಶಾ ವತಿಯಿಂದ ಮಹಿಳಾ ದಿನಾಚರಣೆ - Karavali Times

728x90

9 March 2021

ಮಂಗಳೂರು ಜೇಸಿಐ ದಿಶಾ ವತಿಯಿಂದ ಮಹಿಳಾ ದಿನಾಚರಣೆ


ಮಂಗಳೂರು, ಮಾ. 10, 2021 (ಕರಾವಳಿ ಟೈಮ್ಸ್) : ಜೆಸಿಐ ಮಂಗಳೂರು ದಿಶಾ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಲ್ಲಿಕಟ್ಟೆ ಸುಮ ಸದನ್ ಸಭಾಂಗಣದಲ್ಲಿ ಆಚರಿಸಲಾಯಿತು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಾಂಡೇಶ್ವರ ಮಹಿಳಾ ಪೆÇಲೀಸ್ ಠಾಣಾಧಿಕಾರಿ ರೇವತಿ ಅವರು ಮಹಿಳೆಯರ ಬಗ್ಗೆ ಮಾತನಾಡಿದರು. ಐಶಾ ಫೈಜ, ಡಾ. ಶಾರದ  ಬಂಗೇರ ಅವರು ಮಾತನಡಿದರು. 

ಇದೇ ವೇಳೆ ದೇಶದ ಯೋಧ ಪ್ರವೀಣ್ ಅವರ ಪತ್ನಿ ಸುನಿತಾ ಪ್ರವೀಣ್, ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೂಪ ಹಾಗೂ ಅನ್ನಕ್ಕ ಅವರನ್ನು ಸನ್ಮಾನಿಸಲಾಯಿತು.  

ಜೆಸಿಐ ಮಂಗಳೂರು ದಿಶಾ ಅಧ್ಯಕ್ಷೆ  ಜೇಸಿ ಯೇಸು ಮೇರಿ ಸಾಂತಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಕ್ರೀಡ್ ಅನ್ನು ಜೆಸಿ ರೇಶ್ಮ ಡಿ’ಸೋಜ ವಾಚಿಸಿದರು. ಮೆರ್ಲಿನ್ ಮರಿಯ ಫೆÇೀಲ್ಡರ್  ಸ್ವಾಗತಿಸಿ, ಜೇಸಿ ಸುಮಯ್ಯ ಎಸ್.ಕೆ. ವಂದಿಸಿದರು. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು  ಆಯೋಜಿಸಲಾಗಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಜೇಸಿಐ ದಿಶಾ ವತಿಯಿಂದ ಮಹಿಳಾ ದಿನಾಚರಣೆ Rating: 5 Reviewed By: karavali Times
Scroll to Top