ಬೋಗೋಡಿ ಫ್ರುಟ್ ಇಬ್ರಾಹಿಂ ನಿದನ  - Karavali Times ಬೋಗೋಡಿ ಫ್ರುಟ್ ಇಬ್ರಾಹಿಂ ನಿದನ  - Karavali Times

728x90

22 June 2021

ಬೋಗೋಡಿ ಫ್ರುಟ್ ಇಬ್ರಾಹಿಂ ನಿದನ 

 ಬಂಟ್ವಾಳ, ಜೂನ್ 23, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಹಣ್ಣು-ಹಂಪಲು ವ್ಯಾಪಾರಿಯಾಗಿದ್ದ ಬೋಗೋಡಿ ನಿವಾಸಿ ಇಬ್ರಾಹಿಂ ಯಾನೆ ಇಬ್ರಾಯಾಕ (65) ಅವರು ಅಸೌಖ್ಯದಿಂದ ಬುಧವಾರ (ಜೂನ್ 23, 2021) ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. 

 ಸುದೀರ್ಘ ಅವಧಿಯಲ್ಲಿ ಆಲಡ್ಕದಲ್ಲಿ ಹಣ್ಣು-ಹಂಪಲು ವ್ಯಾಪಾರಿಯಾಗಿದ್ದ ಇವರು ಫ್ರೂಟ್ ಇಬ್ರಾಕ ಎಂದೇ ಚಿರಪರಿಚಿತರಾಗಿದ್ದರು. ಕೆಲ ಸಮಯಗಳಿಂದ ಅಸೌಖ್ಯದಿಂದ ಮನೆಯಲ್ಲೇ ಇದ್ದ ಇವರು ಬುಧವಾರ ರಾತ್ರಿ ಅನಾರೋಗ್ಯ ವೃದ್ದಿಸಿ ಸುಬುಹಿ ಆಝಾನ್ ಸಮಯಕ್ಕೆ ಹೊಂದಿಕೊಂಡು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

 ಮೃತರು ಪತ್ನಿ, ನಾಲ್ಕು ಮಂದಿ ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

 ಇಬ್ರಾಹಿಂ ಅವರ ನಿಧನಕ್ಕೆ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಭೂಯಾ ಸಹಿತ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬೋಗೋಡಿ ಫ್ರುಟ್ ಇಬ್ರಾಹಿಂ ನಿದನ  Rating: 5 Reviewed By: karavali Times
Scroll to Top