ಪುತ್ತೂರು (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಪುತ್ತೂರು ತಾಲೂಕಿನ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆಐಸಿ) ನಲ್ಲಿ ಅಕ್ಸಾ ವತಿಯಿಂದ ದ್ವಜಾರೋಹಣಾ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನಡೆಯಿತು.
ಕೆಐಸಿ ಉಪಪ್ರಾಂಶುಪಾಲ ಇಸ್ಮಾಯಿಲ್ ಮದನಿ ಧ್ವಜಾರೋಹಣಗೈದರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಕೆಐಸಿ ಮ್ಯಾನೇಜರ್ ಅಬ್ದುಲ್ ಸತ್ತಾರ್ ಕೌಸರಿ, ಇಕ್ಲೀಲ್ ಹುದವಿ ತಲಶ್ಶೇರಿ, ಅಶ್ರಫ್ ವಾಫಿಹ್, ಹಾಫಿಝ್ ಇನಾಯತುಲ್ಲಾಹ್ ಅನ್ಸಾರಿ, ಹಾಫಿಝ್ ಬರ್ಜೀಷ್ ಅನ್ಸಾರಿ, ಕೆಐಸಿ ವಾಣಿಜ್ಯ ವಿಭಾಗದ ಉಪನ್ಯಾಸಕ ನವಾಝ್ ಕಟ್ಟದಪಡ್ಪು, ಬಶೀರ್ ಕೌಡಿಚ್ಚಾರ್ ಮೊದಲಾದವರು ಉಪಸ್ಥಿತರಿದ್ದರು.
ಜಾಹೀರಾತುಗಳು
0 comments:
Post a Comment