ಪಡ್ಡಂದಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಕ ದಿನಾಚರಣೆ - Karavali Times ಪಡ್ಡಂದಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಕ ದಿನಾಚರಣೆ - Karavali Times

728x90

18 February 2020

ಪಡ್ಡಂದಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಕ ದಿನಾಚರಣೆ

ಬೆಳ್ತಂಗಡಿ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಪಡ್ಡಂದಡ್ಕ ಶಾಖಾ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ ಬುಧವಾರ ನಡೆಯಿತು. ಸ್ಥಳೀಯ ಮಸೀದಿ ಖತೀಬ್ ಇಸ್ಹಾಕ್ ಫೈಝಿ ಧ್ವಜಾರೋಹಣಗೈದರು. ಈ ಸಂದರ್ಭ ಮದ್ರಸ ಅಧ್ಯಾಪಕರು, ವಿಧ್ಯಾರ್ಥಿಗಳು, ಜಮಾತಿನ ಹಿರಿಯರು, ಮಸೀದಿ ಆಡಳಿತ ಮಂಡಳಿ ಪದಾದಿಕಾರಿಗಳು, ಸದಸ್ಯರು ಮತ್ತು ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.    ಇದೇ ವೇಳೆ ಸ್ಥಳೀಯ ಮದ್ರಸದಲ್ಲಿ ಕಳೆದ ಸಾಲಿನಲ್ಲಿ 5-7 ತರಗತಿಯ  ಪಬ್ಲಿಕ್ ಪರೀಕ್ಷೆಯಲ್ಲಿ  ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಸೀದಿ-ಮದ್ರಸ ಪರಿಸರದಲ್ಲಿ ಸಸಿಗಳನ್ನು ನೆಡುವ ಮೂಲಕ ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲಾಯಿತು. ಪಡ್ಡಂದಡ್ಕ ಶಾಖೆಯ ವಿಖಾಯ ಸದಸ್ಯ ರಹೀಮ್ ಪಡ್ಡಂದಡ್ಕ ಅವರಿಗೆ ಸದಸ್ಯರಿಂದ ಹಾಗೂ ದಾನಿಗಳಿಂದ ಸಂಗ್ರಹಿಸಿದ ನಗದು ಮೊತ್ತವನ್ನು ಹಸ್ತಾಂತರಿಸಲಾಯಿತು.

ಜಾಹೀರಾತುಗಳು  
  • Blogger Comments
  • Facebook Comments

0 comments:

Post a Comment

Item Reviewed: ಪಡ್ಡಂದಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಕ ದಿನಾಚರಣೆ Rating: 5 Reviewed By: lk
Scroll to Top