ಬೆಂಗಳೂರು (ಕರಾವಳಿ ಟೈಮ್ಸ್) : ಇನ್ನು ಮುಂದೆ ವಾಟ್ಸಪ್‍ನಲ್ಲಿ 30 ಸೆಕೆಂಡ್ ವಿಡಿಯೋ ಸ್ಟೇಟಸ್ ಅಪ್‍ಡೇಟ್ ಮಾಡಲು ಸಾಧ್ಯವಿಲ್ಲ. ಕೇವಲ 15 ಸೆಕೆಂಡ್ ಮಾತ್ರ ಸ್ಟೇಟಸ್ ಅಪ್‍ಡೇಟ್ ಆಗಲಿದೆ.
ವಿಶ್ವದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಆದರಲ್ಲೂ ವಾಟ್ಸಪ್ ಚಾಟ್ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ವರ್‍ಗೆ ಬೀಳುತ್ತಿರುವ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ವಾಟ್ಸಪ್ ಈ ನಿರ್ಧಾರಕ್ಕೆ ಬಂದಿದೆ.
ಭಾರತದಲ್ಲಿ ತಾತ್ಕಾಲಿಕವಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಲಾಕ್ ಡೌನ್ ತೆರವು ಮಾಡಿದ ನಂತರ ಪರಿಸ್ಥಿತಿ ಸುಧಾರಿಸಿದರೆ ಮೊದಲಿನಂತೆ 30 ಸಕೆಂಡ್ ವಿಡಿಯೋ ಸ್ಟೇಟಸ್ ಅಪ್‍ಡೇಟ್ ಮಾಡಬಹುದು.
ಕೊರೊನಾದಿಂದ ವಿಶ್ವಾದ್ಯಂತ ಹಲವು ರಾಷ್ಟ್ರಗಳು ಲಾಕ್‍ಡೌನ್ ಘೋಷಿಸಿದ ಪರಿಣಾಮ ನೆಟ್ ಬಳಕೆ ಹೆಚ್ಚಾಗಿದೆ. ನೆಟ್‍ಫ್ಲಿಕ್ಸ್, ಹಾಟ್ ಸ್ಟಾರ್, ಅಮೆಜಾನ್ ಪ್ರೈಂ, ಸಾಮಾಜಿಕ ಜಾಲತಾಣ ಕಂಪೆನಿಗಳ ವಿಡಿಯೋಗಳು ರೆಸೊಲ್ಯೂಷನ್ ಕಡಿಮೆಯಾಗಿದೆ.
0 comments:
Post a Comment