ಬಿಎಸ್ 4 ವಾಹನ ನೋಂದಣಿ ಎಪ್ರಿಲ್ 30ರವರೆಗೆ ವಿಸ್ತರಣೆ - Karavali Times ಬಿಎಸ್ 4 ವಾಹನ ನೋಂದಣಿ ಎಪ್ರಿಲ್ 30ರವರೆಗೆ ವಿಸ್ತರಣೆ - Karavali Times

728x90

2 April 2020

ಬಿಎಸ್ 4 ವಾಹನ ನೋಂದಣಿ ಎಪ್ರಿಲ್ 30ರವರೆಗೆ ವಿಸ್ತರಣೆಬೆಳಗಾವಿ (ಕರಾವಳಿ ಟೈಮ್ಸ್) : ಬಿಎಸ್ವಾಹನ ಖರೀದಿಸಿದವರು ಎಪ್ರಿಲ್ 30ರವರೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಿನ್ನೆ ಮಾತನಾಡಿದ ಅವರು,  ಸುಪ್ರೀಂ ಕೋರ್ಟ್ ಆದೇಶದಂತೆ ಈ ಮೊದಲು ಮಾರ್ಚ್ 31ರೊಳಗೆ ಬಿಎಸ್ವಾಹನ ನೋಂದಣಿ ಮಾಡಿಕೊಳ್ಳಬೇಕಿತ್ತು. ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆಗಿದೆ. ಈ ಕಾರಣಕ್ಕೆ ನೋಂದಣಿ ಸಮಯ ಎಪ್ರಿಲ್ 30ರವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. ಕೇಂದ್ರದ ಮನವಿಗೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದೆ. ಹೀಗಾಗಿ ಬಿಎಸ್ವಾಹನ ಖರೀದಿಸಿದ ಗ್ರಾಹಕರು ಆತಂಕಕ್ಕೆ ಒಳಗಾಗಬಾರದು ಎಂದು ಭರವಸೆ ನೀಡಿದರು.

ವಾಹನ ಖರೀದಿಸಿರುವ ಗ್ರಾಹಕರು ಸಾರಿಗೆ ಇಲಾಖೆಗೆ ಇಮೇಲ್ ಮೂಲಕ ಮಾಹಿತಿ ನೀಡಬೇಕು ಎಂದರು. ಸುಪ್ರೀಂ ಕೋರ್ಟ್ ಆದೇಶದಂತೆ ಈ ಮೊದಲು ಮಾ. 31ರೊಳಗೆ ಬಿಎಸ್ವಾಹನ ನೋಂದಣಿ ಮಾಡಿಕೊಳ್ಳಬೇಕಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ಬಿಎಸ್ 4 ವಾಹನ ನೋಂದಣಿ ಎಪ್ರಿಲ್ 30ರವರೆಗೆ ವಿಸ್ತರಣೆ Rating: 5 Reviewed By: karavali Times
Scroll to Top