ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಿ.ಸಿ.ರೋಡು ಸಮೀಪದ ತಲಪಾಡಿ ಎಂಬಲ್ಲಿ ಲಾಕ್‍ಡೌನ್ ಕಫ್ರ್ಯೂ ಉಲ್ಲಂಘಿಸಿ ರಸ್ತೆಯಲ್ಲಿ ಗುಂಪುಗೂಡಿದ್ದಲ್ಲದೆ ಪೊಲೀಸರನ್ನು ಕಂಡು ಓಟಕಿತ್ತ ಯುವಕರ ಐದು ಬೈಕ್‍ಗಳನ್ನು ಬಂಟ್ವಾಳ ನಗರ ಪೊಲೀಸರು ಗುರುವಾರ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ನಗರ ಪೆÇೀಲೀಸ್ ಠಾಣಾ ಪಿಎಸ್ಸೈ ಅವಿನಾಶ್ ಅವರು ಗುರುವಾರ ಸಂಜೆ ಗಸ್ತಿನಲ್ಲಿದ್ದ ವೇಳೆ ತಲಪಾಡಿ ಮಸೀದಿ ಬಳಿ ಗುಂಪುಗೂಡಿ ನಿಂತಿದ್ದ ಯುವಕರ ಗುಂಪು ಪೊಲೀಸರನ್ನು ಕಂಡು ದ್ವಿಚಕ್ರಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ 5 ದ್ವಿಚಕ್ರ ವಾಹನಗಳನ್ನು ಪೆÇೀಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment