ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ವೈರಸ್‍ಗಾಗಿ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನಲೆಯಲ್ಲಿ ಬಡ ಜನರ ಆಹಾರದ ಹಕ್ಕಿನ ಮೇಲೆ ಯಾರೂ ಪ್ರಹಾರ ನಡೆಸಬಾರದು ಎಂಬ ಕಾರಣಕ್ಕೆ ಈ ಬಾರಿ ಸರಕಾರ ಪಡಿತರ ರೇಶನ್ ಸಾಮಾಗ್ರಿ ಪಡೆದುಕೊಳ್ಳುವ ಎಲ್ಲ ನಿಯಮಾವಳಿಗಳನ್ನು ಕೈಬಿಟ್ಟು ಯಾವುದೇ ರೀತಿಯಲ್ಲಾದರೂ ಬಡವರಿಗೆ ಪಡಿತರ ಸಾಮಾಗ್ರಿ ವಿತರಿಸಿ ಎಂದು ಆದೇಶ ನೀಡಿದೆ. ಅದಲ್ಲೂ ಇಂದು ಮತ್ತೆ ಈ ಕ್ರಮ ಸರಳಗೊಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಡಿತರ ಚೀಟಿ ಇಲ್ಲದಿದ್ದರೂ ಸಾಮಾಗ್ರಿ ವಿತರಣೆಗೆ ಆದೇಶ ನೀಡಿದ್ದಾರೆ.
ಈ ಮಧ್ಯೆ ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಪಡಿತರ ಚೀಟಿ ಗ್ರಾಹಕರಿಗೆ ಮೊಬೈಲ್ ಇಲ್ಲದ ಕಾರಣ ನೀಡಿ ಪಡಿತರ ಸಾಮಾಗ್ರಿ ಒದಗಿಸಿ ಗ್ರಾಹಕರನ್ನು ವಾಪಾಸು ಕಳುಹಿಸುತ್ತಿರುವ ಬಗ್ಗೆ ಗ್ರಾಹಕರು ದೂರಿಕೊಂಡಿದ್ದಾರೆ.
ಸಾಮಾನ್ಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರು ಥಂಬ್ ನೀಡಿ ಪಡಿತರ ಸಾಮಾಗ್ರಿ ಪಡೆದುಕೊಳ್ಳುವ ನಿಯಮ ಜಾರಿಯಲ್ಲಿತ್ತು. ಆದರೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ಥಂಬ್ ಕ್ಯಾನ್ಸಲ್ ಮಾಡಿದ ಸರಕಾರ ಆಧಾರ್ ಲಿಂಕ್ ಮಾಡಿದ ಅಥವಾ ಯಾವುದೇ ಮೊಬೈಲ್ ಸಂಖ್ಯೆಯ ಮೇಲೆ ಒಟಿಪಿ ಮೂಲಕ ರೇಶನ್ ವಿತರಿಸುವಂತೆ ಆದೇಶ ನೀಡಿದೆ. ಸರಕಾರದ ಆದೇಶದಂತೆ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಥಂಬ್ ಇಲ್ಲದೆ, ಆಧಾರ್ ಲಿಂಕ್ ಮಾಡಿದ ಮೊಬೈಲ್ ಇಲ್ಲದೆ ಇದ್ದರೂ ಗ್ರಾಹಕರ ಕೈಯಲ್ಲಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸುವ ಮೂಲಕ ಇನ್ನು ಕೆಲವೆಡೆ ಮೊಬೈಲ್ ಸಂಖ್ಯೆಗಳೇ ಇಲ್ಲದೇ ಇದ್ದರೂ ಪಡಿತರ ವಿತರಿಸುವ ಮೂಲಕ ಬಡ ಜನರ ಆಹಾರ ಭದ್ರತೆಗೆ ಭಂಗ ಆಗಬಾರದು ಎಂಬ ನ್ಯಾಯವನ್ನು ಪಾಲಿಸಲಾಗುತ್ತಿದೆ.
ಆದರೆ ನಂದಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರನ್ನು ಮೊಬೈಲ್ ಲಿಂಕ್ ಆಗಿಲ್ಲ ಎನ್ನುವ ಕಾರಣಕ್ಕೆ ರೇಶನ್ ಒದಗಿಸದೆ ವಾಪಾಸು ಕಳಿಸಲಾಗುತ್ತಿದೆ ಎನ್ನುವ ಸಾರ್ವಜನಿಕರು ಬಡವರು ರೇಶನ್‍ಗಾಗಿ ಅಲೆದಾಟ ನಡೆಸುತ್ತಿರುವ ಬಗ್ಗೆ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
0 comments:
Post a Comment