ಕೊರೋನಾ ವಿರುದ್ಧ ಗೆಲುವು ಸಾಧಿಸುತ್ತಿರುವ ಚೀನಾ : ಜನವರಿ ಬಳಿಕ ವೈರಸ್‍ಗೆ ಯಾರೂ ಬಲಿಯಾಗಿಲ್ಲ - Karavali Times ಕೊರೋನಾ ವಿರುದ್ಧ ಗೆಲುವು ಸಾಧಿಸುತ್ತಿರುವ ಚೀನಾ : ಜನವರಿ ಬಳಿಕ ವೈರಸ್‍ಗೆ ಯಾರೂ ಬಲಿಯಾಗಿಲ್ಲ - Karavali Times

728x90

8 April 2020

ಕೊರೋನಾ ವಿರುದ್ಧ ಗೆಲುವು ಸಾಧಿಸುತ್ತಿರುವ ಚೀನಾ : ಜನವರಿ ಬಳಿಕ ವೈರಸ್‍ಗೆ ಯಾರೂ ಬಲಿಯಾಗಿಲ್ಲಬೀಜಿಂಗ್ (ಕರಾವಳಿ ಟೈಮ್ಸ್) : ಇಡೀ ಜಗತ್ತಿಗೆ ಕೊರೋನಾ ಹಬ್ಬಿಸಿದ ಆರೋಪ ಹೊತ್ತಿರುವ ಮತ್ತು ತನ್ನ ದೇಶದಲ್ಲಿ ಅದೇ ಸೋಂಕಿನ ವಿರುದ್ಧ ಕಂಡು ಕೇಳರಿಯದ ರೀತಿ  ಹೋರಾಟ ನಡೆಸುತ್ತಿರುವ ಚೀನಾ ಇದೀಗ ದೊಡ್ಡ ಯಶಸ್ಸುಗಳಿಸಿದೆ.

ಸೊಮವಾರದಿಂದ ದೇಶದ ಯಾವುದೇ ಭಾಗದಿಂದಲೂ ಕೊರೋನಾ ಸೋಂಕಿಗೆ ಯಾವುದೇ ವ್ಯಕ್ತಿ ಬಲಿಯಾದ ಮಾಹಿತಿ ಬಂದಿಲ್ಲ ಎಂದು ಚೀನಾ ಸರ್ಕಾರ ಘೋಷಣೆ ಮಾಡಿದೆ. ಕೊರೋನಾಗೆ ಬಲಿಯಾದವರ ಮಾಹಿತಿಯನ್ನು ನಿತ್ಯ ಪ್ರಕಟಿಸುತ್ತಿದ್ದ ಚೀನಾ, ಇದೇ ಮೊದಲ ಬಾರಿಗೆ ಎ.6 ರಂದು ದೇಶದಲ್ಲಿ ಯಾವುದೇ ಸಾವು ವರದಿಯಾಗಿಲ್ಲ ಎಂದು ಘೋಷಿಸಿದೆ. ಇದು ಕೊರೋನಾ ನಿಗ್ರಹದಲ್ಲಿ ಚೀನಾ ಕೈಗೊಂಡ ನಿಯಂತ್ರಣ ಕ್ರಮಗಳಿಗೆ ಸಿಕ್ಕಿದ ಜಯದ ಮೊದಲ ಸುಳಿವು ಎನ್ನಲಾಗಿದೆ.

ಆ ದೇಶದಲ್ಲಿ ಈ ವರೆಗೆ 81,740 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 3,331 ಜನ ಸಾವನ್ನಪ್ಪಿದ್ದಾರೆ. 1,242 ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 77,167 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ವಿರುದ್ಧ ಗೆಲುವು ಸಾಧಿಸುತ್ತಿರುವ ಚೀನಾ : ಜನವರಿ ಬಳಿಕ ವೈರಸ್‍ಗೆ ಯಾರೂ ಬಲಿಯಾಗಿಲ್ಲ Rating: 5 Reviewed By: karavali Times
Scroll to Top