2 ತಿಂಗಳ ಬಳಿಕ ಚೀನಾದ ವುಹಾನ್ ನಗರದಲ್ಲಿ ಪ್ರಯಾಣ ನಿರ್ಬಂಧ ತೆರವು : ನಿಲ್ದಾಣಗಳಲ್ಲಿ ಜಮಾಯಿಸಿದ ಜನ - Karavali Times 2 ತಿಂಗಳ ಬಳಿಕ ಚೀನಾದ ವುಹಾನ್ ನಗರದಲ್ಲಿ ಪ್ರಯಾಣ ನಿರ್ಬಂಧ ತೆರವು : ನಿಲ್ದಾಣಗಳಲ್ಲಿ ಜಮಾಯಿಸಿದ ಜನ - Karavali Times

728x90

8 April 2020

2 ತಿಂಗಳ ಬಳಿಕ ಚೀನಾದ ವುಹಾನ್ ನಗರದಲ್ಲಿ ಪ್ರಯಾಣ ನಿರ್ಬಂಧ ತೆರವು : ನಿಲ್ದಾಣಗಳಲ್ಲಿ ಜಮಾಯಿಸಿದ ಜನವುಹಾನ್ (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಎರಡು ತಿಂಗಳಿಗೂ ಅಧಿಕ ಸಮಯದಿಂದ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗಿದೆ.

ಇದರಿಂದ ಬೆಳಗ್ಗೆಯೇ ಸಾವಿರಾರು ಮಂದಿ ಪ್ರಯಾಣಿಕರು ಬೇರೆ ಬೇರೆ ಕಡೆ ತೆರಳುತ್ತಿರುವುದು ಕಂಡುಬಂತು.
ಕಳೆದ ಜನವರಿಯಲ್ಲಿ ಇಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡಿದಾಗ ಚೀನಾ ಸರ್ಕಾರ ಇಲ್ಲಿನ ಜನರು ಹೊರಹೋಗುವುದಕ್ಕೆ ಮತ್ತು ಹೊರಗಿನ ಜನರು ಒಳಬರುವುದಕ್ಕೆ ನಿರ್ಬಂಧ ವಿಧಿಸಿದ್ದರು. ಇದೀಗ ಅಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.

ಬುಧವಾರ ಬೆಳಗ್ಗೆ ಸಾವಿರಾರು ಜನರು ವುಚಂಗ್ ಸ್ಟೇಷನ್‍ಗೆ ಬಂದು ಬೇರೆ ಬೇರೆ ಕಡೆಗಳಿಗೆ ತೆರಳಲು ರೈಲು ಹತ್ತುವ ದೃಶ್ಯ ಕಂಡುಬಂತು.
  • Blogger Comments
  • Facebook Comments

0 comments:

Post a Comment

Item Reviewed: 2 ತಿಂಗಳ ಬಳಿಕ ಚೀನಾದ ವುಹಾನ್ ನಗರದಲ್ಲಿ ಪ್ರಯಾಣ ನಿರ್ಬಂಧ ತೆರವು : ನಿಲ್ದಾಣಗಳಲ್ಲಿ ಜಮಾಯಿಸಿದ ಜನ Rating: 5 Reviewed By: karavali Times
Scroll to Top