ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆಯ ಹಿನ್ನಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ರಾಜ್ಯ ಶಿಕ್ಷಣ ಮಂಡಳಿ ಮೇ ತಿಂಗಳಿಗೆ ಮುಂದೂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಲಾಕ್‍ಡೌನ್ ತೆರವುಗೊಳಿಸಿ, ಜನ ಜೀವನ ಸಹಜ ಸ್ಥಿತಿಗೆ ಬಂದನಂತರ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಮೇ ತಿಂಗಳಲ್ಲಿ ಪ್ರಕಟಿಸಲಾಗುವುದು. ಮಕ್ಕಳು ಪರೀಕ್ಷೆಗಾಗಿ ಸಿದ್ದಗೊಳ್ಳಲು ಸಾಧ್ಯವಾಗುವಂತೆ ಒಂದು ವಾರಕ್ಕೆ ಮುನ್ನ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದಾರೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಎರಡೂ ಪರೀಕ್ಷೆಗಳು ಮಾರ್ಚ್ ಹಾಗೂ ಎಪ್ರಿಲ್ ಮೊದಲ ವಾರದಲ್ಲಿ ನಿಗದಿಯಂತೆ ನಡೆಯಬೇಕಿತ್ತು. ಕಳೆದ ತಿಂಗಳು ಜಾರಿಗೊಳಿಸಿರುವ ಲಾಕ್‍ಡೌನ್ ಜಾರಿಯಿಂದಾಗಿ ನಿಗದಿತ ಪರೀಕ್ಷಾ ದಿನಾಂಕಗಳನ್ನು ಸರಕಾರ ಎರಡನೇ ಬಾರಿ ಮುಂದೂಡಿದೆ.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಕ್ಕಳ ಭವಿಷ್ಯ ಅಧ್ಯಯನದ ಬಗ್ಗೆ ನಿರ್ಧರಿಸುತ್ತದೆ, ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ ಗುರಿ ಹೊಂದಿರುವ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಅತ್ಯಗತ್ಯವಾಗಿದೆ.
0 comments:
Post a Comment