ಉಡುಪಿ : ಮತ್ತೆ 6 ಪಾಸಿಟಿವ್ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 21ಕ್ಕೇರಿಕೆ - Karavali Times ಉಡುಪಿ : ಮತ್ತೆ 6 ಪಾಸಿಟಿವ್ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 21ಕ್ಕೇರಿಕೆ - Karavali Times

728x90

20 May 2020

ಉಡುಪಿ : ಮತ್ತೆ 6 ಪಾಸಿಟಿವ್ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 21ಕ್ಕೇರಿಕೆ



ಉಡುಪಿ (ಕರಾವಳಿ ಟೈಮ್ಸ್) : ಉಡುಪಿ ಜಿಲ್ಲೆಯಲ್ಲಿ ಇಂದು ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,  ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 21ಕ್ಕೇರಿದೆ.

ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‍ನಲ್ಲಿ ಇದ್ದ ಆರು ಮಂದಿಗೆ ಇಂದು ಸೋಂಕು ತಗುಲಿದೆ. ಸೋಂಕಿತರನ್ನು ಕ್ವಾರಂಟೈನ್ ಸೆಂಟರ್‍ಗಳಿಂದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಕ್ವಾರಂಟೈನ್‍ನಲ್ಲಿ ಇರುವ ಒಬ್ಬರು ವೃದ್ಧರಿಗೆ ಮತ್ತು ಯುವಕರಿಗೆ ಕೋವಿಡ್-19 ದೃಢಪಟ್ಟಿದೆ. ಕುಂದಾಪುರ ಕ್ವಾರಂಟೈನ್ ಸೆಂಟರ್‍ನ 15 ಮತ್ತು 4 ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಹೆಬ್ರಿ ತಾಲೂಕಲ್ಲಿ ಕ್ವಾರಂಟೈನ್‍ನಲ್ಲಿರುವ 31 ವರ್ಷ ಹಾಗೂ 47 ವರ್ಷದ ಇಬ್ಬರಿಗೆ ಕೊರೊನಾ ಕಂಡು ಬಂದಿದೆ. ದುಬೈಯಿಂದ ಜಿಲ್ಲೆಗೆ 49 ಜನ ಬಂದಿದ್ದು, ಅವರ ಕೊರೊನಾ ಟೆಸ್ಟ್ ಇಂದಿನಿಂದ ಹಂತ ಹಂತವಾಗಿ ನಡೆಯುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಉಡುಪಿ : ಮತ್ತೆ 6 ಪಾಸಿಟಿವ್ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 21ಕ್ಕೇರಿಕೆ Rating: 5 Reviewed By: karavali Times
Scroll to Top