ಕಲ್ಲಡ್ಕ : ಟ್ಯಾಂಕರ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ದಾರುಣ ಮೃತ್ಯು - Karavali Times ಕಲ್ಲಡ್ಕ : ಟ್ಯಾಂಕರ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ದಾರುಣ ಮೃತ್ಯು - Karavali Times

728x90

6 February 2021

ಕಲ್ಲಡ್ಕ : ಟ್ಯಾಂಕರ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ದಾರುಣ ಮೃತ್ಯು

ಬಂಟ್ವಾಳ, ಫೆ. 07, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ಸವಾರ ಕಲ್ಲಡ್ಕ-ಕೆ ಸಿ ರೋಡು ಸಮೀಪದ ಬಿ ಕೆ ನಗರ ನಿವಾಸಿ ಮುಹಮ್ಮದ್ ರಫೀಕ್ ಎಂಬವರ ಪುತ್ರ ಇಮಾದ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಇಮಾದ್ ಭಾನುವಾರ ತನ್ನ ಸಹೋದರಿಯ ವಿವಾಹ ನಿಶ್ಚಿತಾರ್ಥ ಹಿನ್ನಲೆಯಲ್ಲಿ ಊರಿಗೆ ಬಂದಿದ್ದು, ಇದೇ ಪ್ರಯುಕ್ತ ಭಾನುವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ವಿರುದ್ದ ದಿಕ್ಕಿನಲ್ಲಿ ತೀರಾ ಅಜಾಗರೂಕತೆಯ ಚಾಲನೆಯೊಂದಿಗೆ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಮಾದ್ ದೇಹ ಭಾಗಶಃ ಛಿದ್ರವದ ದೃಶ್ಯ ರಸ್ತೆಯಲ್ಲಿ ಕಂಡು ಬಂದಿದ್ದು, ನೋಡುಗರು ತೀವ್ರ ಮರುಕಪಡುವಂತೆ ಮಾಡಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ : ಟ್ಯಾಂಕರ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ದಾರುಣ ಮೃತ್ಯು Rating: 5 Reviewed By: karavali Times
Scroll to Top