ಬಂಟ್ವಾಳ, ಫೆ. 25, 2021 (ಕರಾವಳಿ ಟೈಮ್ಸ್) : ತೋಟಗಾರಿಕೆ ಇಲಾಖೆ ಮೂಲಕ ಅನುಷ್ಠಾನಗೊಳ್ಳುವ ಎಣ್ಣೆ ತಾಳೆ ವ್ಯವಸಾಯ ಯೋಜನೆಯಡಿ ಎಣ್ಣೆತಾಳೆ ಬೆಳೆ ಬೆಳೆದ ರೈತರಿಗೆ ಎಣ್ಣೆ ತಾಳೆ ಮರದ ಗರಿಗಳನ್ನು ಹಾಗೂ  ಹಣ್ಣಿನ ಗೊಂಚಲುಗಳನ್ನು ಕಟಾವು ಮಾಡುವ ಯಾಂತ್ರೀಕೃತ ಕಟಾವು ಯಂತ್ರಗಳನ್ನು ಫಲಾನುಭವಿಗಳಾದ ಅಮ್ಟಾಡಿ ಗ್ರಾಮದ ರೋಬರ್ಟ್ ಡಿಸೋಜ ಹಾಗೂ ರಾಯಿ ಗ್ರಾಮದ ವಿಕ್ಟರ್ ರೊಡ್ರಿಗಸ್ ಅವರಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಗುರುವಾರ ಶಾಸಕರ ಕಛೇರಿಯಲ್ಲಿ ವಿತರಿಸಿದರು. 
	ಖಾದ್ಯ ತೈಲ ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರಕಾರವು ಎಣ್ಣೆತಾಳೆ ಬೆಳೆ ಬೆಳೆಯಲು ಪೆÇ್ರೀತ್ಸಾಹ ನೀಡುತ್ತಿದ್ದು ರೈತರು ಎಣ್ಣೆ ತಾಳೆ ಬೆಳೆಯಲು ಮುಂದೆ ಬರಬೇಕು ಎಂದು ಇದೇ ವೇಳೆ ಶಾಸಕ ನಾಯಕ್ ರೈತರಿಗೆ ಕರೆ ನೀಡಿದರು. ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೋ ಪ್ರದೀಪ್ ಡಿ’ಸೋಜ ಈ ಸಂದರ್ಭ ಉಪಸ್ಥಿತರಿದ್ದರು. 
25 February 2021
          - Blogger Comments
 - Facebook Comments
 
Subscribe to:
Post Comments (Atom)















0 comments:
Post a Comment