ನಗ್ರಿ ಭಜನಾ ಮಂದಿರ ಸಮುದಾಯ ಭವನಕ್ಕೆ ಬಂಟ್ವಾಳ ಶಾಸಕರಿಂದ ಶಿಲಾನ್ಯಾಸ - Karavali Times ನಗ್ರಿ ಭಜನಾ ಮಂದಿರ ಸಮುದಾಯ ಭವನಕ್ಕೆ ಬಂಟ್ವಾಳ ಶಾಸಕರಿಂದ ಶಿಲಾನ್ಯಾಸ - Karavali Times

728x90

13 July 2021

ನಗ್ರಿ ಭಜನಾ ಮಂದಿರ ಸಮುದಾಯ ಭವನಕ್ಕೆ ಬಂಟ್ವಾಳ ಶಾಸಕರಿಂದ ಶಿಲಾನ್ಯಾಸ

ಬಂಟ್ವಾಳ, ಜುಲೈ 13, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರ 50 ಲಕ್ಷ  ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಮಂಗಳವಾರ ಶಾಸಕ ರಾಜೇಶ್ ನಾಯಕ್ ಅವರು ಶಿಲಾನ್ಯಾಸಗೈದರು. 

ಈ ವೇಳೆ ಮಾತನಾಡಿದ ಅವರು, ಸರಕಾರದ ಅನುದಾನಗಳ ಮೂಲಕ ಗ್ರಾಮದ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದರು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಗ್ರಾಮಸ್ಥರ ಒಗ್ಗಟ್ಟಿನ ಸಹಕಾರ ಸದಾ ಇರಲಿ ಎಂದವರು ಆಶಿಸಿದರು. 

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಗ್ರಾ.ಪಂ ಅದ್ಯಕ್ಷೆ ಹರಿಣಾಕ್ಷಿ, ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ ಸಜಿಪ, ಸಂಜೀವ ಪೂಜಾರಿ, ಯಶವಂತ ದೇರಾಜೆ, ಸುರೇಶ್ ಪೂಜಾರಿ ಸಾರ್ಥವ, ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ಶಿವಪ್ರಸಾದ್ ಶೆಟ್ಟಿ, ಗಣಪತಿ ಭಟ್ ಕೋಮಾಲಿ, ಉದಯಕುಮಾರ್ ಕಾಂಜಿಲ, ದೇವಿಪ್ರಸಾದ್ ಪೂಂಜಾ, ಸುಂದರ ಪೂಜಾರಿ, ಶೈಲೇಶ್ ಪೂಜಾರಿ, ಮೋಹನ್ ದಾಸ್, ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಅಗಲಿಬೆಟ್ಟು, ಪ್ರಶಾಂತ್ ಪೂಜಾರಿ ವಿಟ್ಲುಕೋಡಿ, ಸುಂದರಿ, ಶೋಭಾ ಶೆಟ್ಟಿ, ವಿಶ್ವನಾಥ ಬೆಳ್ಚಾಡ, ಆಶೋಕ್, ಕುಶಾಲಕ್ಷ,  ಸೋಮನಾಥ ಬಂಗೇರ ಹಾಗೂ ಭಜನಾ ಮಂಡಳಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಸಮುದಾಯ ಭವನಕ್ಕೆ ಶ್ರಮಿಸಿದ ಯಶವಂತ ನಾಯ್ಕ ನಗ್ರಿ ಅವರನ್ನು ಗೌರವಿಸಲಾಯಿತು.

ಶ್ರೀ ಶಾರದ ಭಜನಾ ಮಂದಿರದ ಆದ್ಯಕ್ಷ ರತ್ನಾಕರ್ ನಾಡಾರ್ ಸ್ವಾಗತಿಸಿ, ಶಾರದ ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್ ವಂದಿಸಿದರು. ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ನಗ್ರಿ ಭಜನಾ ಮಂದಿರ ಸಮುದಾಯ ಭವನಕ್ಕೆ ಬಂಟ್ವಾಳ ಶಾಸಕರಿಂದ ಶಿಲಾನ್ಯಾಸ Rating: 5 Reviewed By: karavali Times
Scroll to Top