ಅಸಂಘಟಿತ ಕಾರ್ಮಿಕರನ್ನು ಸಂಘಟತರನ್ನಾಗಿ ಮಾಡಿ ಸರಕಾರಿ ಸೌಲಭ್ಯಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕಾಗಿದೆ : ಅಬ್ಬಾಸ್ ಅಲಿ - Karavali Times ಅಸಂಘಟಿತ ಕಾರ್ಮಿಕರನ್ನು ಸಂಘಟತರನ್ನಾಗಿ ಮಾಡಿ ಸರಕಾರಿ ಸೌಲಭ್ಯಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕಾಗಿದೆ : ಅಬ್ಬಾಸ್ ಅಲಿ - Karavali Times

728x90

10 September 2021

ಅಸಂಘಟಿತ ಕಾರ್ಮಿಕರನ್ನು ಸಂಘಟತರನ್ನಾಗಿ ಮಾಡಿ ಸರಕಾರಿ ಸೌಲಭ್ಯಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕಾಗಿದೆ : ಅಬ್ಬಾಸ್ ಅಲಿ

ಮಂಗಳೂರು, ಸೆಪ್ಟಂಬರ್ 10, 2021 (ಕರಾವಳಿ ಟೈಮ್ಸ್) : ಅಸಂಘಟತ ವರ್ಗದ ಕಾರ್ಮಿಕರನ್ನು ಸಂಘಟಿತರನ್ನಾಗಿ ಮಾಡಿ ಸರಕಾರಿ ಸವಲತ್ತುಗಳ ಬಗ್ಗೆ ಅವರಿಗೆ ತಿಳಿಸಿ ಅವರನ್ನು ಸದೃಢರಾಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಅಭಿಪ್ರಾಯಪಟ್ಟರು. 

ಮಂಗಳೂರು-ಮಲ್ಲಿಕಟ್ಟೆಯ ಡಿಸಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಬ್ಲಾಕ್ ಅಧ್ಯಕ್ಷರುಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸಭೆಯಲ್ಲಿ ಘಟಕದ ಬ್ಲಾಕ್ ಸಮಿತಿ, ವಲಯ ಸಮಿತಿಗಳನ್ನು ಶೀಘ್ರ ರಚಿಸುವುದಾಗಿ ತೀರ್ಮಾನಿಸಲಾಯಿತು, ಅಸಂಘಟಿತ ಕಾರ್ಮಿಕರ ನೊಂದಾವಣಿ ಶಿಬಿರವನ್ನು ಆಯಾ ಬ್ಲಾಕ್ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಯಿತು.   ಕಾರ್ಮಿಕ ಕಿಟ್ ವಿತರಣೆಯಲ್ಲಿ ಆದ ಗೊಂದಲವನ್ನು ಕೊನೆಗೊಳಿಸಿ ಪ್ರತಿ ಪಂಚಾಯತ್ ಮುಖಾಂತರ ವಿತರಿಸುವಂತೆ ಸಭೆ ಒತ್ತಾಯಿಸಿತು. 

ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ನಿರಂಜನ ರೈ ಹಾಗೂ ವಿವಿಧ ಬ್ಲಾಕ್ ಅಧ್ಯಕ್ಷರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಅಸಂಘಟಿತ ಕಾರ್ಮಿಕರನ್ನು ಸಂಘಟತರನ್ನಾಗಿ ಮಾಡಿ ಸರಕಾರಿ ಸೌಲಭ್ಯಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕಾಗಿದೆ : ಅಬ್ಬಾಸ್ ಅಲಿ Rating: 5 Reviewed By: karavali Times
Scroll to Top