ಹೈದರಾಬಾದ್ ವಿರುದ್ಧ ನಿರಾಯಾಸ ಜಯ ಸಾಧಿಸಿದ ಡೆಲ್ಲಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ  - Karavali Times ಹೈದರಾಬಾದ್ ವಿರುದ್ಧ ನಿರಾಯಾಸ ಜಯ ಸಾಧಿಸಿದ ಡೆಲ್ಲಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ  - Karavali Times

728x90

22 September 2021

ಹೈದರಾಬಾದ್ ವಿರುದ್ಧ ನಿರಾಯಾಸ ಜಯ ಸಾಧಿಸಿದ ಡೆಲ್ಲಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ 

ದುಬೈ, ಸೆಪ್ಟೆಂಬರ್ 22, 2021 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ ಎರಡನೇ ಭಾಗದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್‍ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

 135 ರನ್‍ಗಳ ಸಾಧಾರಣ ಮೊತ್ತದ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 139 ರನ್ ಭಾರಿಸಿ ಜಯಗಳಿಸಿತು. ಈ ಮೂಲಕ ಡೆಲ್ಲಿ 9 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿದೆ. 

 ಶಿಖರ್ ಧವನ್ 42 ರನ್ (37 ಎಸೆತ, 6 ಬೌಂಡರಿ, 1 ಸಿಕ್ಸರ್) ಭಾರಿಸಿ ಔಟಾದರು. ಶ್ರೇಯಸ್ ಅಯ್ಯರ್ ಅಜೇಯ 47 ರನ್ (41 ಎಸೆತ, 2 ಬೌಂಡರಿ, 2 ಸಿಕ್ಸರ್) ರಿಷಭ್ ಪಂತ್ ಅಜೇಯ 35 ರನ್ (21 ಎಸೆತ, 3 ಬೌಂಡರಿ, 2 ಸಿಕ್ಸರ್) ಭಾರಿಸಿದರು. 

 ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಮೊದಲ ಓವರಿನಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಕಳೆದುಕೊಂಡಿತ್ತು. ವೃದ್ದಿಮಾನ್ ಸಹಾ 18 ರನ್ ರನ್, ಅಬ್ದುಲ್ ಸಮಾದ್ 28 ರನ್ (21 ಎಸೆತ, 2 ಬೌಂಡರಿ, 1 ಸಿಕ್ಸರ್), ರಶೀದ್ ಖಾನ್ 22 ರನ್ (19 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. 

 ಕಗಿಸೋ ರಬಡಾ 3 ವಿಕೆಟ್ ಪಡೆದರೆ ಅನ್ರಿಚ್ ನಾಟ್ರ್ಜೆ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.

  • Blogger Comments
  • Facebook Comments

0 comments:

Post a Comment

Item Reviewed: ಹೈದರಾಬಾದ್ ವಿರುದ್ಧ ನಿರಾಯಾಸ ಜಯ ಸಾಧಿಸಿದ ಡೆಲ್ಲಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ  Rating: 5 Reviewed By: karavali Times
Scroll to Top