ಸೌಹಾರ್ದಕ್ಕಾಗಿ “ನಮ್ಮೂರ ಮಸೀದಿ ನೋಡ ಬನ್ನಿ” : ನ 7 ರಂದು ಬೋಳಂಗಡಿಯಲ್ಲಿ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ - Karavali Times ಸೌಹಾರ್ದಕ್ಕಾಗಿ “ನಮ್ಮೂರ ಮಸೀದಿ ನೋಡ ಬನ್ನಿ” : ನ 7 ರಂದು ಬೋಳಂಗಡಿಯಲ್ಲಿ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ - Karavali Times

728x90

4 November 2021

ಸೌಹಾರ್ದಕ್ಕಾಗಿ “ನಮ್ಮೂರ ಮಸೀದಿ ನೋಡ ಬನ್ನಿ” : ನ 7 ರಂದು ಬೋಳಂಗಡಿಯಲ್ಲಿ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ

ಬಂಟ್ವಾಳ, ನವೆಂಬರ್ 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬೋಳಂಗಡಿ ಹವ್ವಾ ಜುಮಾ ಮಸೀದಿ ವತಿಯಿಂದ ಸಮಾಜದಲ್ಲಿ ಸೌಹಾರ್ದತೆ ಬೆಸೆಯುವುದಕ್ಕಾಗಿ ಧರ್ಮ-ಧಾರ್ಮಿಕ ವಿಧಿ-ವಿಧಾನಗಳನ್ನು ಪಾರದರ್ಶಕವನ್ನಾಗಿ ಮಾಡುವ ಉದ್ದೇಶದಿಂದ “ನಮ್ಮೂರ ಮಸೀದಿ ನೋಡ ಬನ್ನಿ” ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮವು ನವೆಂಬರ್ 7 ರಂದು ಬೋಳಂಗಡಿ ಹವ್ವಾ ಜುಮಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕೆಯ್ಯೂರು ನಾರಾಯಣ ಭಟ್, ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿಗಾರ್, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞÂ, ಬೋಳಂಗಡಿ ಹವ್ವಾ ಜುಮಾ ಮಸೀದಿ ಧರ್ಮಗುರು ಮೌಲಾನಾ ಯಹ್ಯಾ ತಂಙಳ್ ಮದನಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10 ರಿಂದ ಸಂಜೆ 6.30ರವರೆಗೆ ಸಾರ್ವಜನಿಕರಿಗೆ ಮಸೀದಿ ಸಂದರ್ಶನಕ್ಕೆ ಅವಕಾಶವಿದ್ದು, ಪ್ರಾರ್ಥನಾ ಸಮಯದಲ್ಲೂ ವೀಕ್ಷಣೆಗೆ ಅವಕಾಶ ಇದೆ ಎಂದು ಹವ್ವಾ ಮಸೀದಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

1 comments:

Item Reviewed: ಸೌಹಾರ್ದಕ್ಕಾಗಿ “ನಮ್ಮೂರ ಮಸೀದಿ ನೋಡ ಬನ್ನಿ” : ನ 7 ರಂದು ಬೋಳಂಗಡಿಯಲ್ಲಿ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ Rating: 5 Reviewed By: karavali Times
Scroll to Top