ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : 2021-22ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬಿ ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಗೂಡಿನಬಳಿ ಶೇ.85 ಫಲಿತಾಂಶ ದಾಖಲಿಸಿದ್ದು, 23 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿದ್ದಾರೆ.
ಕಲಾ ವಿಭಾಗದಲ್ಲಿ ಶೇ. 82 ಫಲಿತಾಂಶ ಬಂದಿದ್ದು, ಸಾಜಿದಾ ಬಾನು (571 ಅಂಕ), ಬಾಸಿಲ (541), ರೆಯಾನ (529) ಅತ್ತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ. 93 ಫಲಿತಾಂಶ ದಾಖಲಾಗಿದ್ದು, ಯಜ್ಞಾ (569), ಅನುಷ್ (564), ಧನ್ಯ (560), ಅಝ್ಮಿಯ (551), ಕಾವ್ಯ (546), ಮೆನಾಝ್ (543), ಅಂಜಲಿ (532), ಸಿಂಚನಾ ಕೆ (530), ಸಂಧ್ಯಾ (529), ಹಸ್ನಾ ಕೆ (524), ದೀಕ್ಷಾ (518), ಅಂಕಿತ್ (516), ಕೌಶಿಕಾ (513), ಜೀತನ್ (512), ಅಂಕಿತಾ (512), ಆಯಿಷಾ (510) ಫಾತಿಮತ್ ಅಫ್ರೀನಾ (510) ಅತ್ತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ. 80 ಫಲಿತಾಂಶ ದಾಖಲಾಗಿದೆ. ನಿರೀಕ್ಷಾ ಎಸ್ (575), ಮೋಕ್ಷಿತಾ (532) ಹಾಗೂ ಭವ್ಯ ಕೆ (518) ಅತ್ತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
0 comments:
Post a Comment