ಮಂಗಳೂರು ಅಂಚೆ ವಿಭಾಗದಿಂದ ಪುತ್ತೂರಿನ ಬಾಲವನಕ್ಕೆ ಡಾ| ಕೋಟ ಶಿವರಾಮ ಕಾರಂತರ ವಿಶೇಷ ಅಂಚೆ ಚೀಟಿ ಫಲಕ ಹಸ್ತಾಂತರ - Karavali Times ಮಂಗಳೂರು ಅಂಚೆ ವಿಭಾಗದಿಂದ ಪುತ್ತೂರಿನ ಬಾಲವನಕ್ಕೆ ಡಾ| ಕೋಟ ಶಿವರಾಮ ಕಾರಂತರ ವಿಶೇಷ ಅಂಚೆ ಚೀಟಿ ಫಲಕ ಹಸ್ತಾಂತರ - Karavali Times

728x90

18 June 2022

ಮಂಗಳೂರು ಅಂಚೆ ವಿಭಾಗದಿಂದ ಪುತ್ತೂರಿನ ಬಾಲವನಕ್ಕೆ ಡಾ| ಕೋಟ ಶಿವರಾಮ ಕಾರಂತರ ವಿಶೇಷ ಅಂಚೆ ಚೀಟಿ ಫಲಕ ಹಸ್ತಾಂತರ

ಮಂಗಳೂರು, ಜೂನ್ 18, 2022 (ಕರಾವಳಿ ಟೈಮ್ಸ್) : 2003 ರಲ್ಲಿ ಭಾರತೀಯ ಅಂಚೆ ಇಲಾಖೆಯು ಡಾ. ಶಿವರಾಮ ಕಾರಂತರ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು. ಈ ಅಂಚೆ ಚೀಟಿ ಹಾಗೂ ಇದರ ಬಗ್ಗೆ ಸಮಗ್ರ ಮಾಹಿತಿ ಇರುವ ವಿಶೇಷ ಫಲಕವನ್ನು ಪುತ್ತೂರಿನ ಬಾಲವನಕ್ಕೆ ಇತ್ತೀಚೆಗ ಹಸ್ತಾಂತರಿಸಲಾಯಿತು.

ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ಪುತ್ತೂರಿನ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಅವರಿಗೆ ಇದನ್ನು ಹಸ್ತಾಂತರಿಸಿದರು. 

ಈ ಸಂಧರ್ಭ ಮಂಗಳೂರಿನ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು, ಬಾಲವನದ ಮೇಲ್ವಿಚಾರಕ ಅಶೋಕ್, ಆರ್ಟ್ ಗ್ಯಾಲರಿಯ ಮೇಲ್ವಿಚಾರಕ ಸುಂದರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಈ ಫಲಕವು ಇನ್ನು ಮುಂದೆ ಸಾರ್ವಜನಿಕರಿಗೆ ಬಾಲವನದಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಅಂಚೆ ವಿಭಾಗದಿಂದ ಪುತ್ತೂರಿನ ಬಾಲವನಕ್ಕೆ ಡಾ| ಕೋಟ ಶಿವರಾಮ ಕಾರಂತರ ವಿಶೇಷ ಅಂಚೆ ಚೀಟಿ ಫಲಕ ಹಸ್ತಾಂತರ Rating: 5 Reviewed By: karavali Times
Scroll to Top