ಸಾಲ ಮರುಪಾವತಿಗೆ ಕಿರುಕುಳ, ಬೆದರಿಕೆ ಮೂಲಕ ಹಣ ವಸೂಲಿ : 5 ಮಂದಿ ಆರೋಪಿಗಳನ್ನು ದಾರವಾಢದಿಂದ ಬಂಧಿಸಿದ ಮಹಾರಾಷ್ಟ್ರ ಪೊಲೀಸ್ - Karavali Times ಸಾಲ ಮರುಪಾವತಿಗೆ ಕಿರುಕುಳ, ಬೆದರಿಕೆ ಮೂಲಕ ಹಣ ವಸೂಲಿ : 5 ಮಂದಿ ಆರೋಪಿಗಳನ್ನು ದಾರವಾಢದಿಂದ ಬಂಧಿಸಿದ ಮಹಾರಾಷ್ಟ್ರ ಪೊಲೀಸ್ - Karavali Times

728x90

14 June 2022

ಸಾಲ ಮರುಪಾವತಿಗೆ ಕಿರುಕುಳ, ಬೆದರಿಕೆ ಮೂಲಕ ಹಣ ವಸೂಲಿ : 5 ಮಂದಿ ಆರೋಪಿಗಳನ್ನು ದಾರವಾಢದಿಂದ ಬಂಧಿಸಿದ ಮಹಾರಾಷ್ಟ್ರ ಪೊಲೀಸ್

ಮುಂಬೈ, ಜೂನ್ 14, 2022 (ಕರಾವಳಿ ಟೈಮ್ಸ್) : ಸಾಲ ಮರುಪಾವತಿಗಾಗಿ ಕಿರುಕುಳ ಹಾಗೂ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಐದು ಮಂದಿ ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಕರ್ನಾಟಕದ ಧಾರವಾಢದಿಂದ ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಸುಹೇಲ್ ನಾಸಿರುದ್ದೀನ್ ಸಯ್ಯದ್ (24), ಅಹಮದ್ ರಜಾ ಜಾಹಿದ್ ಹುಸೇನ್ (26), ಸಯ್ಯದ್ ಅಥರ್ (24), ಕೈಫ್ ಕದರಿ (22) ಮತ್ತು ಮುಫ್ತಿಯಾಜ್ ಬಾಷಾ ಪೀರಜಾದೆ (21) ಎಂದು ಗುರುತಿಸಲಾಗಿದೆ.

ಬಂಧಿತ ಐದೂ ಮಂದಿ ಲೋನ್ ಆಪ್ ಏಜೆಂಟರುಗಳಾಗಿದ್ದು, ಸಾಲವನ್ನು ಮರುಪಾವತಿಸಲು ವಿಫಲವಾದರೆ ಅವರ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಸಂತ್ರಸ್ತರಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರ ಸೈಬರ್ ಸೆಲ್ ವಿಭಾಗದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಆರೋಪಿಗಳೆಲ್ಲರೂ ಸುಶಿಕ್ಷಿತರಾಗಿದ್ದು, ಅವರಲ್ಲಿ ಒಬ್ಬರು ಎಂಬಿಎ ಪದವಿ ಪದವೀಧರಾಗಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈನ ಉಪನಗರ ಮುಲುಂಡ್ ಪರಿಸರದ ವ್ಯಕ್ತಿಯೊಬ್ಬರು 11,000 ರೂಪಾಯಿ ಸಾಲ ಪಡೆದ ನಂತರ ಲೋನ್ ಆಪ್ ಏಜೆಂಟ್‍ಗಳಿಂದ ಕಿರುಕುಳ ಅನುಭವಿಸಿದ್ದರು. ಈ ಕುರಿತಂತೆ ಮಹಾರಾಷ್ಚ್ರ ಸೈಬರ್ ಸೆಲ್ ಗೆ ದೂರು ಕೂಡ ಸಲ್ಲಿಕೆ ಮಾಡಿದ್ದರು. ಅವರ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ ನಂತರ ಈ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ ಅವರು ಮೇ ತಿಂಗಳವರೆಗೆ 96,000/- ರೂಪಾಯಿ (ಬಡ್ಡಿ ಸಹಿತ) ನೀಡಬೇಕು ಎಂದು ಕಿರುಕುಳ ನೀಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು.

ದೂರು ಸ್ವೀಕರಿಸಿದ ವಿಶೇಷ ತಂಡ ನಡೆಸಿದ ತನಿಖೆಯಲ್ಲಿ, ಸೈಬರ್ ಪೆÇಲೀಸರು ಬೆದರಿಕೆ ಹಾಕಲು ಬಳಸಿದ ಫೆÇೀನ್ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಕರ್ನಾಟಕದ ವ್ಯಕ್ತಿಯೊಬ್ಬರು ವಾಟ್ಸಾಪ್ ಸಂದೇಶಕ್ಕಾಗಿ ಈ ಫೆÇೀನ್ ಸಂಖ್ಯೆಯನ್ನು ಬಳಸುತ್ತಿದ್ದರು. ಪೆÇಲೀಸರು ಧಾರವಾಡಕ್ಕೆ ಆಗಮಿಸಿ ಎಲ್ಲ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

ಆರೋಪಿಗಳು ‘ಹ್ಯಾಂಡಿ ಲೋನ್’ ಮತ್ತು ಇತರ ಅರ್ಜಿಗಳನ್ನು ಬಳಸಿಕೊಂಡು ತಮ್ಮ ಸಂತ್ರಸ್ತರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಪ್ರಸ್ತುತ ಅವರನ್ನು ಐದು ದಿನಗಳ ಕಾಲ ಪೆÇಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವ್ಯಕ್ತಿಗಳನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ, ಸೈಬರ್ ಇಲಾಖೆಯು ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ 2,084 ದೂರುಗಳನ್ನು ಸ್ವೀಕರಿಸಿದೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 420 (ವಂಚನೆ), 383 (ಸುಲಿಗೆ), 500 (ಮಾನನಷ್ಟ) ಮತ್ತು ಐಟಿ ಕಾಯಿದೆಯ ಇತರ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಾಲ ಮರುಪಾವತಿಗೆ ಕಿರುಕುಳ, ಬೆದರಿಕೆ ಮೂಲಕ ಹಣ ವಸೂಲಿ : 5 ಮಂದಿ ಆರೋಪಿಗಳನ್ನು ದಾರವಾಢದಿಂದ ಬಂಧಿಸಿದ ಮಹಾರಾಷ್ಟ್ರ ಪೊಲೀಸ್ Rating: 5 Reviewed By: karavali Times
Scroll to Top