ಬಂಟ್ವಾಳ, ಜೂನ್ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ, ಮೆಲ್ಕಾರ್-ಬೋಳಂಗಡಿ ಎಂ ಎಚ್ ರಸ್ತೆ ನಿವಾಸಿ ಹಾಜಿ ಪಿ ಕೆ ಅಬೂಬಕ್ಕರ್ (74) ಅವರು ಹೃದಯಾಘಾತದಿಂದ ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಗುಡ್ಡೆಅಂಗಡಿಯಲ್ಲಿ ಸೋಮವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದ ಉಮ್ಮರ್ ಫಾರೂಕ್ ಅವರ ಮೃತದೇಹದ ಅಂತಿಮ ದರ್ಶನವನ್ನು ಮಂಗಳವಾರ ಮುಂಜಾನೆ ನಡೆಸಿ ಬಂದಿದ್ದ ಅಬೂಬಕ್ಕರ್ ಹಾಜಿ ಅಲ್ಲಿಂದ ಸಮೀಪದಲ್ಲಿರುವ ತನ್ನ ಪುತ್ರನ ಮನೆಗೆ ತೆರಳಿದ್ದರು. ಅಲ್ಲಿಯೇ ಹೃದಯ ಬೇನೆಗೆ ಒಳಗಾದ ಅವರನ್ನು ತಕ್ಷಣ ಅಲ್ಲಿಂದ ಸ್ವಗೃಹಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ, ನಾಲ್ಕು ಮಂದಿ ಪುತ್ರರು, ಮೂರು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಮಂಗಳವಾರ ಅಪರಾಹ್ನ ವೇಳೆಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
0 comments:
Post a Comment