ಮಳೆಗಾಲದಲ್ಲಿ ನೀರು ತುಂಬುವ ಏತಡ್ಕ ಬಸ್ಸು ತಂಗುದಾಣಕ್ಕೆ ಕಾಯಕಲ್ಪ ಒದಗಿಸಿ : ಸ್ಥಳೀಯರ ಆಗ್ರಹ - Karavali Times ಮಳೆಗಾಲದಲ್ಲಿ ನೀರು ತುಂಬುವ ಏತಡ್ಕ ಬಸ್ಸು ತಂಗುದಾಣಕ್ಕೆ ಕಾಯಕಲ್ಪ ಒದಗಿಸಿ : ಸ್ಥಳೀಯರ ಆಗ್ರಹ - Karavali Times

728x90

5 July 2022

ಮಳೆಗಾಲದಲ್ಲಿ ನೀರು ತುಂಬುವ ಏತಡ್ಕ ಬಸ್ಸು ತಂಗುದಾಣಕ್ಕೆ ಕಾಯಕಲ್ಪ ಒದಗಿಸಿ : ಸ್ಥಳೀಯರ ಆಗ್ರಹ

 ಬದಿಯಡ್ಕ, ಜುಲೈ 06, 2022 (ಕರಾವಳಿ ಟೈಮ್ಸ್) : ಕಾಸರಗೋಡು ಜಿಲ್ಲೆಯ ಕುಮ್ಡಾಜೆ ಗ್ರಾಮದ ಬದಿಯಡ್ಕ ಸಮೀಪದ ಏತಡ್ಕದಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಅವ್ಯವಸ್ಥೆ ಉಂಟಾದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಇಲ್ಲಿನ ಏತಡ್ಕ- ಕಿನ್ನಿಂಗಾರು ರಸ್ತೆಯ ಬಳಿ ಇರುವ ಏತಡ್ಕ ಬಸ್ಸು ತಂಗುದಾಣದಲ್ಲಿ ಅರ್ಧದಷ್ಟು ನೀರು ತುಂಬಿದ್ದು, ಪ್ರಯಾಣಿಕರ ಪಾಲಿಗೆ ಬಸ್ಸು ತಂಗುದಾಣ ಇದ್ದೂ ಇಲ್ಲದಂತಾಗಿದೆ. ಮಣ್ಣು-ಮರಳು ತುಂಬಿ ತಂಗುದಾಣ ಸಂಪೂರ್ಣ ಮುಚ್ಚಿ ಹೋದಂತಿದೆ. 

ಊರಿನ ಜನರಿಗೆ ಈ ಬಸ್ಸು ತಂಗುದಾಣ ಉಪಯೋಗಕ್ಕೆ ಬಾರದಂತಾಗಿದೆ. ಇದೀಗ ಮಳೆಗಾಲದಲ್ಲಿ ಬಸ್ಸು ತಂಗುದಾಣದಲ್ಲಿ ಆಶ್ರಯ ಪಡೆಯೋಣವೆಂದರೆ ತಂಗುದಾಣದೊಳಗೆ ನೀರು ತುಂಬಿದೆ. ಶಾಲಾ ವಾಹನಗಳಿಗಾಗಿ ಕಾಯುವ ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿನ ತಂಗುದಾಣದ ಅವ್ಯವಸ್ಥೆಯಿಂದಾಗಿ ಪರದಾಟ ನಡೆಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. 

 ತಕ್ಷಣ ಸಂಬಂಧಪಟ್ಟವರು ಈ ಬಗ್ಗೆ ಎಚ್ಚೆತ್ತುಕೊಂಡು ಇಲ್ಲಿನ ಬಸ್ಸು ತಂಗುದಾಣದ ಅವ್ಯವಸ್ಥೆಗೆ ಸೂಕ್ತ ಕಾಯಕಲ್ಪ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಳೆಗಾಲದಲ್ಲಿ ನೀರು ತುಂಬುವ ಏತಡ್ಕ ಬಸ್ಸು ತಂಗುದಾಣಕ್ಕೆ ಕಾಯಕಲ್ಪ ಒದಗಿಸಿ : ಸ್ಥಳೀಯರ ಆಗ್ರಹ Rating: 5 Reviewed By: karavali Times
Scroll to Top