ಬಿ.ಸಿ.ರೋಡು : ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಹಾರ್ನ್ ಹಾಕಿದ ಎಂಬ ಕ್ಷುಲ್ಲಕ ನೆಪಕ್ಕೆ ಯುವಕನ ಇರಿದು ಕೊಂದ ಕಿರಾತಕರು - Karavali Times ಬಿ.ಸಿ.ರೋಡು : ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಹಾರ್ನ್ ಹಾಕಿದ ಎಂಬ ಕ್ಷುಲ್ಲಕ ನೆಪಕ್ಕೆ ಯುವಕನ ಇರಿದು ಕೊಂದ ಕಿರಾತಕರು - Karavali Times

728x90

4 July 2022

ಬಿ.ಸಿ.ರೋಡು : ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಹಾರ್ನ್ ಹಾಕಿದ ಎಂಬ ಕ್ಷುಲ್ಲಕ ನೆಪಕ್ಕೆ ಯುವಕನ ಇರಿದು ಕೊಂದ ಕಿರಾತಕರು

 ಬಂಟ್ವಾಳ, ಜುಲೈ 05, 2022 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ನೋಡಿ ಹಾರ್ನ್ ಹೊಡೆಯುತ್ತಾನೆ ಎಂಬ ಕ್ಷುಲ್ಲಕ ದ್ವೇಷದಿಂದ ಉಂಟಾದ ಮಾತಿನ ಚಕಮಕಿ ಯುವಕನ ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಸೋಮವಾರ (ಜುಲೈ 4) ರಾತ್ರಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ ಸಿ ರೋಡು ಸಮೀಪದ ಶಾಂತಿಅಂಗಡಿ- ಪೊನ್ನೊಡಿಯಲ್ಲಿರುವ ಲಗೂನ್ ಕೊಕೊನೆಟ್ ಹೊಟೇಲ್ ಬಳಿ ಸಂಭವಿಸಿದೆ. 

 ಈ ಬಗ್ಗೆ ಶಾಂತಿಅಂಗಡಿ ನಿವಾಸಿ ಎಸ್ ಎಚ್ ಹನೀಫ್ ಅವರ ಮಗ ಮಹಮ್ಮದ್ ನೌಫಲ್ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ನಾನು ಗೆಳಯನಾದ ಶಾಂತಿಅಂಗಡಿ ನಿವಾಸಿ ಬಿ ಅಬ್ದುಲ್ ಖಾದರ್ ಅವರ ಪುತ್ರ ಆಸೀಫ್ ಜೊತೆ ಪ್ರತಿದಿನ ಕೆಲಸ ಮುಗಿಸಿ ಸಂಜೆ ಅಥವಾ ರಾತ್ರಿ ಶಾಂತಿಯಂಗಡಿ ಬಳಿ ಸೇರುತ್ತಿದ್ದೆವು. ಜುಲೈ 4ರ ಸೋಮವಾರ ರಂದು ರಾತ್ರಿ 10.30 ಗಂಟೆಗೆ ನಾನು ಮನೆಯಲ್ಲಿರುವಾಗ ಗೆಳಯ ಆಸೀಫ್ ಕರೆ ಮಾಡಿ ಶಾಂತಿಯಂಗಡಿ ಸ್ಟೋರ್ ಬಳಿ ಇದ್ದೇನೆ ಮಾರಿಪಳ್ಳ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ ನನ್ನನ್ನು ಸ್ಕೂಟಿ ಜೊತೆಗೆ ತಡೆದು ಹೊಡೆಯಲು ಬಂದು ಧಮ್ಕಿ ಹಾಕುತ್ತಿದ್ದಾರೆ ಕೊಡಲೇ ಬರುವಂತೆ ಹೇಳಿದ್ದಾನೆ. 

ಆ ಪ್ರಕಾರ ನಾನು ಆಸೀಫನ ತಮ್ಮ ಅನ್ಸಾರ್, ಗೆಳಯರಾದ ಕೌಶಿಕ್ ಹಾಗೂ ನಿಜಾಮುದ್ದೀನ್ ಸೇರಿಕೊಂಡು ಶಾಂತಿಯಂಗಡಿ ಸ್ಟೋರ್ ಬಳಿ ಮೋಟಾರ ಸೈಕಲ್ ನಲ್ಲಿ ಹೋಗಿದ್ದು, ಅಲ್ಲಿದ್ದ ಆಸೀಫ್ ನನ್ನು ವಿಚಾರಿಸಿದಾಗ ಆರೋಪಿಗಳಾದ ಮಹಮ್ಮದ್ ನೌಫೆಲ್ ಮಾರಿಪಳ್ಳ ಹಾಗೂ ಮಹಮ್ಮದ್ ನೌಸೀರ್ ಮಾರಿಪಳ್ಳ ಅವರು ಕೈಯಿಂದ ಹೊಡೆದು ಕೊಲೆ ಮಾಡುವುದಾಗಿ ಧಮ್ಕಿ ಹಾಕಿ ಪೊನ್ನೊಡಿಯಲ್ಲಿರುವ ಲಗೂನ್ ಕೊಕೊನೆಟ್ ಹೊಟೇಲ್ ಕಡೆಗೆ ಹೋಗಿರುತ್ತಾರೆ ಮತ್ತು ಅಲ್ಲಿಗೆ ಬರುವಂತೆಯೂ ಬೆದರಿಕೆ ಹಾಕಿರುತ್ತಾರೆಂದು ತಿಳಿಸಿರುತ್ತಾನೆ. 

ಆಗ ನಾವು ವಿಷಯ‌ ಏನೆಂದು ತಿಳಿದು ತಕರಾರು ಸರಿ ಮಾಡುವ ಎಂಬ ಉದ್ದೇಶದಿಂದ ಆಸೀಫ್ ನನ್ನು ಆತನ ಡಿಯೋ ಮೋಟಾರ ಸೈಕಲ್ ನಲ್ಲಿ ಕರೆದುಕೊಂಡು ಪೊನ್ನೊಡಿಯಲ್ಲಿರುವ ಲಗೂನ್ ಕೊಕೊನೆಟ್ ಹೊಟೇಲ್ ಬಳಿ ಇರುವ ಗೂಡಂಗಡಿ ಹತ್ತಿರ ಹೋಗಿದ್ದು, ಅಲ್ಲಿ ಗೂಡಂಗಡಿ ಬಳಿಯಲ್ಲಿದ್ದ ಆರೋಪಿತರಲ್ಲಿ ಯಾಕೆ ನೀವು ಆಸೀಫನಿಗೆ ಹೊಡೆದು ಧಮ್ಕಿ ಹಾಕಿದ್ದೀರಿ ಎಂದು ವಿಚಾರ ಮಾಡುತ್ತಿದ್ದಂತೆ ನೌಫಾಲ್ ಮಾರಿಪಳ್ಳ ಎಂಬಾತ ನೀನು ಬಾರಿ ಪಂಚಾಯತಿಗೆ ಮಾಡುತ್ತೀಯ ಎಂದು ಬೈದು ಮರದ ಸೊಂಟೆಯಿಂದ ನನ್ನ ಎಡ ಕಣ್ಣಿನ ಬಳಿ, ಎಡಭುಜಕ್ಕೆ ಹೊಡೆದನು ಆಗ ಆಸೀಫ್, ಅನ್ಸಾರ್, ಕೌಸೀರ್ ಹಾಗೂ ನಿಜಾಮುದ್ದೀನ್ ತಡೆಯಲು ಬಂದಾಗ ಆರೋಪಿಗಳ ಜೊತೆ ಉರುಡಾಟ ಆಗಿದೆ. ಈ ಸಂದರ್ಭ ದ್ದು, ನೌಪಾಲ್ ಮಾರಿಪಳ್ಳ ಎಂಬಾತ ಆಸೀಫ್ ನನ್ನು ಉದ್ದೇಶಿಸಿ ಬೇರ್ವಾಸಿ ಸೊಳೆ ಮಗನೇ, ನಿನ್ನನ್ನು ಇವತ್ತೇ ಮುಗಿಸದೇ ಬಿಡುವುದಿಲ್ಲ ಎಂದು ಹೇಳುತ್ತಾ ಆತನ ಕೈಯಲ್ಲಿದ್ದ ಚೂರಿಯಿಂದ ಆಸೀಫನಿಗೆ ಹೊಟ್ಟೆಯ ಬಲ ಬದಿಗೆ ಎದೆಗೆ ಕೈಗೆ ತಿವಿದಿದ್ದಾನೆ. ಆಗ ಆಸೀಫ್ ಬೊಬ್ಬೆ ಹೊಡೆಯುತ ನೆಲಕ್ಕೆ ಕುಸಿದು ಬಿದ್ದಿದ್ದಾನೆ. 

ಈ ಸಂದರ್ಭ ಆಸೀಫನ ಬೊಬ್ಬೆ ಕೇಳಿ ನೆರೆಯವರು ಸೇರಿದ್ದು, ಗಾಯಗೊಂಡ ಆಸೀಫನನ್ನು ವಾಹನದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ವತ್ರೆಗೆ ಗೆಳೆಯರು ಕರೆದುಕೊಂಡು ಬಂದಿರುತ್ತಾರೆ ಸದ್ರಿ ಆಸ್ವತ್ರೆಯ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಇರಿತದಿಂದ ಗಂಭೀರ ಗಾಯಗೊಂಡಿದ್ದ ಆಸೀಫ್ ಮೃತಪಟ್ಟಿದ್ದಾನೆ. 

 ಘಟನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ನಡೆದಿದ್ದು, ಘಟನೆಗೆ ಕಾರಣವೆನೆಂದರೆ ಪ್ರತಿದಿನ ಪೊನ್ನೊಡಿಯಲ್ಲಿರುವ ಲಗೂನ ಕೊಕೊನೆಟ್ ಹೊಟೇಲ್ ಬಳಿ ಆಸೀಫ್ ತನ್ನ ಡಿಯೋ ಮೋಟಾರ ಸೈಕಲ್ ನಲ್ಲಿ ಹೋಗುತ್ತಿರುವಾಗ ಆರೋಪಿಗಳನ್ನು ನೋಡಿ ಸುಖಾ ಸುಮ್ಮನೆ ಹಾರ್ನ್ ಹಾಕುತ್ತಾನೆ ಎಂಬ ಕ್ಷುಲ್ಲಕ ದ್ವೇಷದಿಂದ ಕೈಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದಲ್ಲದೆ ವಿಚಾರಿಸಲು ಹೋದಾಗ ನೌಪಾಲ್ ನು ಚೂರಿಯಿಂದ ಆಸೀಫ್ ನಿಗೆ ತಿವಿದು ತ್ರೀವ ಗಾಯಗೊಳಿಸಿ ಕೊಲೆ ಮಾಡಿರುವುದಾಗಿದೆ ಎಂದು ಆಸೀಫನ ಸ್ನೇಹಿತ ನೌಫಲ್ ಶಾಂತಿಅಂಗಡಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. 

 ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2022 ಕಲಂ: 323, 504, 324, 506, 302 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಹಾರ್ನ್ ಹಾಕಿದ ಎಂಬ ಕ್ಷುಲ್ಲಕ ನೆಪಕ್ಕೆ ಯುವಕನ ಇರಿದು ಕೊಂದ ಕಿರಾತಕರು Rating: 5 Reviewed By: karavali Times
Scroll to Top