ಬಂಟ್ವಾಳ, ನವೆಂಬರ್ 02, 2022 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಚಿಕ್ಕಯ್ಯಮಠ ನಿವಾಸಿ ಸತೀಶ್ ಅವರ ಮನೆಗೆ ಮಂಗಳವಾರ ಹಾಡುಹಗಲೇ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತೀಶ್ ಹಾಗೂ ಅವರ ಪತ್ನಿ ಸಂಧ್ಯಾ ಅವರು ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆಯ ಎದುರು ಬಾಗಿಲಿ£ಂದಲೇ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಸುಮಾರು 4.60 ಲಕ್ಷ ರೂಪಾಯಿ ಮೌಲ್ಯದ 11.5 ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸಂಜೆ ವೇಳೆ ದಂಪತಿ ಕೆಲಸ ಬಿಟ್ಟು ಮನೆಗೆ ಬಂದ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಂಧ್ಯಾ ಅವರು ಠಾಣೆಗೆ £ೀಡಿದ ದೂರಿನಂತೆ ಪೊಲೀಸರು ಭೇಟಿ £ೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment