ಬಂಟ್ವಾಳ, ನವೆಂಬರ್ 03, 2022 (ಕರಾವಳಿ ಟೈಮ್ಸ್) : ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅಹ್ಮದ್ ಮೌಲಾ (ಖ.ಸಿ.) ಅವರ 144ನೇ ಆಂಡ್ ನೇರ್ಚೆ ಪ್ರಯುಕ್ತ ದಿನಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಾಳೆ (ನವೆಂಬರ್ 8) ಮಂಗಳವಾರ ಮರ್‍ಹೂಂ ಶೈಖುನಾ ಮಿತ್ತಬೈಲು ಉಸ್ತಾದರ ಮನೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 6.30ಕ್ಕೆ ಖತಮುಲ್ ಕುರ್-ಆನ್, 10.30ಕ್ಕೆ ಹಖೀಖತ್ ಮಾಲಪ್ಪಾಟ್, ಬಳಿಕ ನಕ್ಷಬಂಧೀ ಮೌಲಿದ್ ಮಜ್ಲಿಸ್ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment