ಪ್ರಧಾನಿ ತವರು ರಾಜ್ಯ ಗುಜರಾತಿನಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ : ಡಿ 1, 5 ರಂದು 2 ಹಂತಗಳಲ್ಲಿ ಚುನಾವಣೆ, ಡಿ 8 ರಂದು ಕೌಟಿಂಗ್ - Karavali Times ಪ್ರಧಾನಿ ತವರು ರಾಜ್ಯ ಗುಜರಾತಿನಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ : ಡಿ 1, 5 ರಂದು 2 ಹಂತಗಳಲ್ಲಿ ಚುನಾವಣೆ, ಡಿ 8 ರಂದು ಕೌಟಿಂಗ್ - Karavali Times

728x90

3 November 2022

ಪ್ರಧಾನಿ ತವರು ರಾಜ್ಯ ಗುಜರಾತಿನಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ : ಡಿ 1, 5 ರಂದು 2 ಹಂತಗಳಲ್ಲಿ ಚುನಾವಣೆ, ಡಿ 8 ರಂದು ಕೌಟಿಂಗ್

ನವದೆಹಲಿ, ನವೆಂಬರ್ 03, 2022 (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ಚುನಾವಣಾ ದಿನಾಂಕ ಘೋಷಿಸಲಾಗಿದ್ದು, ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಜೊತೆಗೆ ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯವೂ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಗುಜರಾತ್ ವಿಧಾನಸಭೆಯ ಅವಧಿ ಮುಂದಿನ ವರ್ಷ ಫೆಬ್ರವರಿ 18ಕ್ಕೆ ಕೊನೆಗೊಳ್ಳಲಿದೆ. ಇಲ್ಲಿನ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತ್ತು ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. 

ಮೊದಲ ಹಂತದ ಮತದಾನಕ್ಕೆ ನವೆಂಬರ್ 5 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ನವೆಂಬರ್ 14 ಕಡೆ ದಿನ. ನವೆಂಬರ್ 15 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ನವೆಂಬರ್ 17 ಕೊನೆಯ ದಿನಾಂಕವಾಗಿದೆ.  

ಎರಡನೇ ಹಂತದ ಚುನಾವಣೆಗೆ ನವೆಂಬರ್ 10 ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು, ನಾಮಪತ್ರ ಸಲ್ಲಿಕೆಗೆ ನವೆಂಬರ್ 17 ಕೊನೆ ದಿನವಾಗಿದೆ. ನವೆಂಬರ್ 18 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನವೆಂಬರ್ 21 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. 

ಗುಜರಾತ್ 182 ವಿಧಾನಸಭಾ ಸ್ಥಾನಗಳ ಪೈಕಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದು ಸತತ ಆರನೇ ಬಾರಿ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿತ್ತು. ಇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಚುನಾವಣೆಯಲ್ಲಿ ಸೋತರೂ 30 ವರ್ಷಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 

ಶೇಕಡಾವಾರು ಲೆಕ್ಕದಲ್ಲಿ ಬಿಜೆಪಿ ಶೇಕಡಾ 49.05 ಮಾನ್ಯ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇಕಡಾ 42.97 ರಷ್ಟು ಮತಗಳನ್ನು ಪಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಯ ನಂತರ ಕೆಲವು ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಬಿಜೆಪಿ ಸದನದಲ್ಲಿ ತನ್ನ ಸಂಖ್ಯೆಯನ್ನು 111 ಕ್ಕೆ ಹೆಚ್ಚಿಸಿಕೊಂಡಿತು. ಕಾಂಗ್ರೆಸ್ ಸಂಖ್ಯೆ 62 ಕ್ಕೆ ಇಳಿಯಿತು. 

  • Blogger Comments
  • Facebook Comments

0 comments:

Post a Comment

Item Reviewed: ಪ್ರಧಾನಿ ತವರು ರಾಜ್ಯ ಗುಜರಾತಿನಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ : ಡಿ 1, 5 ರಂದು 2 ಹಂತಗಳಲ್ಲಿ ಚುನಾವಣೆ, ಡಿ 8 ರಂದು ಕೌಟಿಂಗ್ Rating: 5 Reviewed By: karavali Times
Scroll to Top