ಮಂಗಳೂರು, ನವೆಂಬರ್ 14, 2022 (ಕರಾವಳಿ ಟೈಮ್ಸ್) : ಅಂಚೆ ಇಲಾಖೆ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಒಡಂಬಡಿಕೆಯಿಂದ ಮನೆ ಬಾಗಿಲಿಗೆ ತಲುಪಿಸುವ ಜನನ/ ಮರಣ ಪ್ರಮಾಣ ಪತ್ರಗಳ ಸೇವಾ ಶುಲ್ಕವನ್ನು 100 ರೂಪಾಯಿಯಿಂದ 80 ರೂಪಾಯಿಗೆ ಇಳಿಸಿದೆ.
ಕಳೆದ ಮಾರ್ಚ್ 21 ರಿಂದ ಮಂಗಳೂರು ಅಂಚೆ ವಿಭಾಗವು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಸಹಯೋಗದೊಂದಿಗೆ ಸ್ಪೀಡ್ ಪೆÇೀಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆಗೆ ಚಾಲನೆ ನೀಡಿತ್ತು.
ಬಳಿಕ ಈ ಸೇವೆಯನ್ನು ವೆನ್ಲಾಕ್ ಆಸ್ಪತ್ರೆ, ಲೇಡಿಗೊಶೇನ್ ಆಸ್ಪತ್ರೆ ಹಾಗೂ ಜನನ/ ಮರಣ ಪ್ರಮಾಣ ಪತ್ರವನ್ನು ನೀಡುವ ಮಂಗಳೂರಿನ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲಾಗಿತ್ತು. ಇದುವರೆಗೆ 2345 ಅರ್ಜಿದಾರರು ಈ ಸೇವೆಯ ಸದುಪಯೋಗವನ್ನು ಪಡೆದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತಿರುವ ಹಿನ್ನೆಲೆಯಲ್ಲಿ ಈ ಸೇವೆಗೆ ನಿಗದಿಪಡಿಸಲಾಗಿದ್ದ ಶುಲ್ಕವನ್ನು 100/- ರೂಪಾಯಿಯಿಂದ 80/- ರೂಪಾಯಿಗೆ ಇಳಿಸಲಾಗಿದೆ. ಈ ಪರಿಷ್ಕ್ರತ ಶುಲ್ಕವು ನವೆಂಬರ್ 15 ರಿಂದ ಜಾರಿಗೆ ಬರಲಿದ್ದು, ಸಾರ್ವಜನಿಕರು ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಂಗಳೂರು ಅಂಚೆ ಇಲಾಖೆಯಹಿತಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment