ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಟ್ರಾಫಿಕ್ ದಂಡ ಶುಲ್ಕ ಅಂಚೆ ಕಛೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಚಾಲನೆ - Karavali Times ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಟ್ರಾಫಿಕ್ ದಂಡ ಶುಲ್ಕ ಅಂಚೆ ಕಛೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಚಾಲನೆ - Karavali Times

728x90

14 November 2022

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಟ್ರಾಫಿಕ್ ದಂಡ ಶುಲ್ಕ ಅಂಚೆ ಕಛೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಚಾಲನೆ

ಮಂಗಳೂರು, ನವೆಂಬರ್ 14, 2022 (ಕರಾವಳಿ ಟೈಮ್ಸ್) : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಟ್ರಾಫಿಕ್ ನಿಯಮ ಉಲ್ಲಂಘನೆಯ ಬಗ್ಗೆ ದಂಡ ಶುಲ್ಕವನ್ನು ಅಂಚೆ ಕಚೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಮಂಗಳವಾರ (ನ 14) ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಚಾಲನೆ ನೀಡಲಾಯಿತು. 

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಮಿಷನರ್ ಎನ್ ಶಶಿ ಕುಮಾರ್ ಅವರು ಅಂಚೆ ಇಲಾಖೆಯ ಮಂಗಳೂರು ಹಿರಿಯ ಅಧೀಕ್ಷಕ ಶ್ರೀಹರ್ಷ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು  ಅಂಚೆ ಕಛೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಚಾಲನೆ ನೀಡಿದರು. 

ಈ ಸಂದರ್ಭ ಉಪ ಪೊಲೀಸ್ ಆಯುಕ್ತರಾದ ಅಂಶು ಕುಮಾರ್ ಶ್ರೀವಾಸ್ತವ್, ಗೀತಾ ಕುಲಕರ್ಣಿ, ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್ ಬಿ, ಉಪಸ್ಥಿತರಿದ್ದರು.

ಪ್ರಸ್ತುತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಪಾವತಿಸುವ ಸೌಲಭ್ಯ ಕೇವಲ ಆನ್ ಲೈನ್ ಮೂಲಕ ಅಥವಾ 4 ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಗಳಲ್ಲಿ (ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆ, ಕದ್ರಿ, ಟ್ರಾಫಿಕ್ ಪಶ್ಚಿಮ ಪೊಲೀಸ್ ಠಾಣೆ, ಪಾಂಡೇಶ್ವರ, ಟ್ರಾಫಿಕ್ ಉತ್ತರ ಪೊಲೀಸ್ ಠಾಣೆ, ಸುರತ್ಕಲ್, ಟ್ರಾಫಿಕ್ ದಕ್ಷಿಣ ಪೊಲೀಸ್ ಠಾಣೆ, ನಾಗುರಿ) ಹಾಗೂ 4 ಮಂಗಳೂರು ಒನ್ ಕೇಂದ್ರಗಳಲ್ಲಿ (ಮಲ್ಲಿಕಟ್ಟೆ, ಲಾಲ್ ಬಾಗ್, ಬಾವುಟಗುಡ್ಡೆ, ಸುರತ್ಕಲ್) ಮಾತ್ರ ಲಭ್ಯವಿರುವುದು. ಆದರೆ ಇನ್ನು ಮುಂದೆ ಈ ಸೌಲಭ್ಯವು ಕರ್ನಾಟಕದ ಎಲ್ಲಾ ಪ್ರಧಾನ ಹಾಗೂ ಉಪ ಅಂಚೆ ಕಛೇರಿಗಳಲ್ಲಿ ದೊರಕಲಿದೆ. 

ಈಗ ಹೆಲ್ಮೆಟ್ ಹಾಕದೆ, ಸೀಟ್ ಬೆಲ್ಟ್ ಧರಿಸದೆ ಅಥವಾ ತ್ರಿಬಲ್ ರೈಡ್, ದೋಷ ಯುಕ್ತ ನಂಬರ್ ಪ್ಲೇಟ್ ಅಳವಡಿಸಿ ವಾಹನ ಚಲಾಯಿಸುವವರು, ಪೆÇಲೀಸರ ಕಣ್ತಪ್ಪಿಸಿ ಪಾರಾಗುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರಂಭಿಸಲಾದ ಆಟೋಮೇಷನ್ ಸೆಂಟರ್ ಮೂಲಕ ವಾಹನಗಳ ಮಾಹಿತಿ ತಕ್ಷಣ ಲಭಿಸುತ್ತಿದೆ. ಇದರಿಂದ ಆ ವಾಹನದ ಮಾಲಕರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ನೋಟಿಸ್ ದೊರೆತ ಏಳು ದಿನಗಳೊಳಗಾಗಿ ದಂಡ ಪಾವತಿಸಬೇಕಾಗಿದೆ. ಒಂದು ವೇಳೆ ಕರ್ನಾಟಕದ ಬೇರೆ ಯಾವುದೇ ಊರಿನಲ್ಲಿ ನೋಂದಣಿಗೊಂಡ ವಾಹನ ಮಂಗಳೂರಿಗೆ ಬಂದು ಸಂಚಾರಿ ನಿಯಮ ಉಲ್ಲಂಘಿಸಿದರೆ, ಅವರ ವಿಳಾಸಕ್ಕೆ ನೋಟಿಸು ಹೋಗುತ್ತದೆ. ಆದರೆ ಅವರು ಮಂಗಳೂರಿಗೆ ಬಂದು ದಂಡ ಪಾವತಿಸುವುದು ಬಹಳ ಕಷ್ಟದ ವಿಷಯ. ಆದರೆ ಇನ್ನು ಮುಂದೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ದಕ್ಷಿಣ ಕನ್ನಡದ 126 ಅಂಚೆ ಕಛೇರಿಗಳು ಹಾಗೂ ಉಡುಪಿ ಜಿಲ್ಲೆಯ 62 ಅಂಚೆ ಕಛೇರಿಗಳು ಸೇರಿದಂತೆ ಕರ್ನಾಟಕದ 1702 ಇಲಾಖಾ ಅಂಚೆ ಕಛೇರಿಗಳಲ್ಲಿ ನಗದು ಅಥವಾ ಕ್ಯೂ ಆರ್ ಕೋಡ್ ಸ್ಯ್ಕಾನ್ ಮಾಡುವ ಮೂಲಕ ಪಾವತಿ ಮಾಡಬಹುದಾಗಿದೆ. 

ಅಂಚೆ ಕಛೇರಿಗಳಲ್ಲಿ ಇ-ಪೇಮೆಂಟ್ ಸೇವೆಯಡಿಯಲ್ಲಿ ಸ್ವೀಕೃತಗೊಳ್ಳುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಎಪಿಐ ಎಕೀಕರಣದ ಮೂಲಕ ಮಂಗಳೂರು ನಗರ ಪೆÇಲೀಸ್ ಸರ್ವರ್ ಒನ್ ಲೈನ್ ನಲ್ಲಿ ತಕ್ಷಣದಲ್ಲೇ ರವಾನಿಸಲಾಗುವುದು. ಅಂಚೆ ಕಛೇರಿಯಲ್ಲಿ ನೀಡಲಾಗುವ ಈ ಸೌಲಭ್ಯಕ್ಕೆ ಸೇವಾ ಶುಲ್ಕಗಳು ಅನ್ವಯವಾಗುತ್ತವೆ. ಸೇವಾ ಶುಲ್ಕಗಳು 1 ಸಾವಿರ ರೂಪಾಯಿವರೆಗೆ ದಂಡ ಶುಲ್ಕಕ್ಕೆ 10/- ರೂಪಾಯಿ ಸೇವಾ ಶುಲ್ಕ ವಿಧಿಸಿದರೆ, 1 ಸಾವಿರದಿಂದ ಎರಡೂವರೆ ಸಾವಿರದವರೆಗೆ 15/- ರೂಪಾಯಿ, ಎರಡೂವರೆ ಸಾವಿರದಿಂದ ಐದು ಸಾವಿರದವರೆಗೆ 20/- ರೂಪಾಯಿ ಹಾಗೂ 5 ಸಾವಿರ ರೂಪಾಯಿ ಮೇಲ್ಪಟ್ಟ ದಂಡ ಶುಲ್ಕಗಳಿಗೆ 25/- ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. 

ಸಂಚಾರಿ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಅಂಚೆ ಕಛೇರಿಯಲ್ಲಿ ಕಟ್ಟಲು ಗ್ರಾಹಕರು ಮಂಗಳೂರು ನಗರ ಪೊಲೀಸರಿಂದ ತಮ್ಮ ಮನೆ ವಿಳಾಸಕ್ಕೆ ಕಳಿಸಲ್ಪಟ್ಟ ನೋಟಿಸ್ ತರತಕ್ಕದ್ದು. ಒಂದು ವೇಳೆ ತಂದಿಲ್ಲದಿದ್ದಲ್ಲಿ, ಗ್ರಾಹಕರು ತಮ್ಮ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನದ ನೋಂದಣಿ ಸಂಖ್ಯೆಯನ್ನು ಹೇಳಿ ದಂಡ ಶುಲ್ಕವನ್ನು ಕಟ್ಟಬಹುದು. ಒಂದು ವೇಳೆ ವಾಹನ ಮಾಲಿಕರಿಗೆ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಒಂದಕ್ಕಿಂತ ಜಾಸ್ತಿ ನೋಟಿಸ್ ಜಾರಿಯಾಗಿದ್ದು ಗ್ರಾಹಕರು ತಮ್ಮ  ಹಳೆಯ ನೋಟಿಸನ್ನು ತಾರದಿದ್ದಲ್ಲಿ  ಅಥವಾ ಕಳೆದು ಹೋದಲ್ಲಿ ಅಂತಹ ನೋಟಿಸ್ ಗಳ ವಿವರಗಳನ್ನು ಗ್ರಾಹಕರು ವಾಹನ ನೋಂದಣಿ ಸಂಖ್ಯೆ ನೀಡುವ ಮೂಲಕ ಪಡೆದುಕೊಂಡು ತಮ್ಮ ಬಾಕಿಯಿದ್ದ ಎಲ್ಲಾ ಅಥವಾ ಕೆಲವು ನೋಟಿಸುಗಳ ದಂಡ ಶುಲ್ಕ ಪಾವತಿ ಮಾಡಬಹುದು. ಅದಲ್ಲದೆ ವಾಹನ ಮಾರಾಟದ ಸಮಯದಲ್ಲಿ ಆ ವಾಹನದ ಮೇಲೆ ಏನಾದರೂ ದಂಡ ಶುಲ್ಕವಿದೆಯೇ ಎಂದು ಗ್ರಾಹಕರು ಅಂಚೆ ಕಚೇರಿಗಳಲ್ಲಿ ಪರಿಶೀಲಿಸಿ ಅಂಚೆ ಕಛೇರಿಗಳಲ್ಲಿ ಅದನ್ನು ತಕ್ಷಣ ಪಾವತಿಸಬಹುದು. 

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಈ ಸೌಲಭ್ಯದಡಿ ಮಂಗಳೂರು, ಉಡುಪಿ ಮಾತ್ರವಲ್ಲದೆ ಕರ್ನಾಟಕದ ಎಲ್ಲಾ 1702 ಇಲಾಖಾ ಅಂಚೆ ಕಛೇರಿಗಳಲ್ಲಿ ನವೆಂಬರ್ 14ರಿಂದಲೇ ಪಾವತಿಸಬಹುದಾಗಿದೆ ಎಂದು ಮಂಗಳೂರು ಅಂಚೆ ಇಲಾಖೆಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಟ್ರಾಫಿಕ್ ದಂಡ ಶುಲ್ಕ ಅಂಚೆ ಕಛೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಚಾಲನೆ Rating: 5 Reviewed By: karavali Times
Scroll to Top