ಪುತ್ತೂರು, ನವೆಂಬರ್, 06, 2022 (ಕರಾವಳಿ ಟೈಮ್ಸ್) : ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಪುತ್ತೂರು ತಾಲೂಕು ಸಮಾವೇಶ ಪುತ್ತೂರಿನಲ್ಲಿ ಭಾನುವಾರ (ನ 6) ನಡೆಯಿತು.
ಸಮಾವೇಶ ಉದ್ಘಾಟಿಸಿದ ಹಿರಿಯ ಕಾರ್ಮಿಕ ಮುಖಂಡ ಕೆ ಪಿ ರಾಬರ್ಟ್ ಡಿಸೋಜ ಮಾತನಾಡಿ, ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯನ್ನು ಉಳಿಸಲು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಅಬ್ದುಲ್ ರಝಾಕ್ ಸಮಾವೇಶದ ಅದ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಪ್ರಸ್ತಾವನೆಗೈದರು. ಕಾರ್ಮಿಕ ಮುಖಂಡ ರಾಜೀವ ಅಳಿಕೆ ಸ್ವಾಗತಿಸಿ, ವಂದಿಸಿದರು.
0 comments:
Post a Comment