ಬಂಟ್ವಾಳ, ನವೆಂಬರ್ 10, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಜೆಸಿಐ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಛಾಯಾಗ್ರಾಹಕ ರಾಜೇಂದ್ರ ಅವರು ಆಯ್ಕೆಯಾಗಿದ್ದಾರೆ. ಜೆಸಿಐ ಬಂಟ್ವಾಳದ ಅಧ್ಯಕ್ಷ ರೋಷನ್‍ರೈ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಕಾರ್ಯದರ್ಶಿಯಾಗಿ ರಶ್ಮಿ ವಚನ್ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀನಿವಾಸ್ ಹಾಗೂ ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಗಣೇಶ್ ಕುಲಾಲ್, ಕಿರಣ್, ಮನೋಜ್ ಕನಪಾಡಿ, ವಚನ್ ಶೆಟ್ಟಿ, ಕಿಶೋರ್ ಆಚಾರ್ಯ, ವಿದ್ಯಾ ಉಮೇಶ್, ಜೆಜೆಸಿ ಸಂಯೋಜಕರಾಗಿ ಲೋಕೇಶ್ ಸುವರ್ಣ, ಮಹಿಳಾ ಜೆಸಿ ಸಂಯೋಜಕಿಯಾಗಿ ದೀಪ್ತಿ ರೋಷನ್ ರೈ, ಜೆಜೆಸಿ ಅಧ್ಯಕ್ಷರಾಗಿ ಜಯರಾಜ್ ಅವರನ್ನು ನೇಮಿಸಲಾಗಿದೆ ಎಂದು ಜೆಸಿಐ ಪ್ರಕಟಣೆ ತಿಳಿಸಿದೆ.
0 comments:
Post a Comment