ಮಂಗಳೂರು : ನವೆಂಬರ್ 18 ರಂದು ಪಿಂಚಣಿದಾರರ ಅದಾಲತ್ ಹಾಗೂ ತ್ರೈಮಾಸಿಕ ಅಂಚೆ ಅದಾಲತ್ - Karavali Times ಮಂಗಳೂರು : ನವೆಂಬರ್ 18 ರಂದು ಪಿಂಚಣಿದಾರರ ಅದಾಲತ್ ಹಾಗೂ ತ್ರೈಮಾಸಿಕ ಅಂಚೆ ಅದಾಲತ್ - Karavali Times

728x90

8 November 2022

ಮಂಗಳೂರು : ನವೆಂಬರ್ 18 ರಂದು ಪಿಂಚಣಿದಾರರ ಅದಾಲತ್ ಹಾಗೂ ತ್ರೈಮಾಸಿಕ ಅಂಚೆ ಅದಾಲತ್

ಮಂಗಳೂರು, ನವೆಂಬರ್ 08, 2022 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದ ಅರ್ಧ ವಾರ್ಷಿಕ ಪಿಂಚಣಿದಾರರ ಅದಾಲತ್ ನವೆಂಬರ್ 18 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಅಂಚೆ ವಿಭಾಗದ ಬಲ್ಮಠದಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ. ಅದೇ ದಿನ ಅಪರಾಹ್ನ 3:30ಕ್ಕೆ ತ್ರೈಮಾಸಿಕ ಅಂಚೆ ಅದಾಲತ್ ಕೂಡ ಇದೇ ಕಛೇರಿಯಲ್ಲಿ ನಡೆಯಲಿದೆ.

ಅದಾಲತ್ತಿನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು. ಪಿಂಚಣಿದಾರರ ಅದಾಲತ್ತಿನಲ್ಲಿ ಪಿಂಚಣಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲಾಗುವುದು.

ಸಾರ್ವಜನಿಕರು ಈ ಬಗ್ಗೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮುಖೇನ “ಪಿಂಚಣಿದಾರರ ಅದಾಲತ್/ ಅಂಚೆ ಅದಾಲತ್” ತಲೆಬರಹದಡಿಯಲ್ಲಿ ನವೆಂಬರ್ 17ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ ಮಂಗಳೂರು 575002” ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291072 ಗೆ  ಕಳುಹಿಸಬಹುದು. 

ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯು ಮಂಗಳೂರು, ಉಳ್ಳಾಲ, ಮೂಲ್ಕಿ ತಾಲೂಕು ಹಾಗೂ ಕಾರ್ಕಳ ತಾಲೂಕಿನ ಬೆಳ್ಮಣ್ಣು ಅಂಚೆ ಕಛೇರಿ ಮತ್ತು ಮುಂಡ್ಕೂರು ಅಂಚೆ ಕಛೇರಿಯನ್ನು ಒಳಗೊಂಡಿರುತ್ತದೆ. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ನವೆಂಬರ್ 18 ರಂದು ಪಿಂಚಣಿದಾರರ ಅದಾಲತ್ ಹಾಗೂ ತ್ರೈಮಾಸಿಕ ಅಂಚೆ ಅದಾಲತ್ Rating: 5 Reviewed By: karavali Times
Scroll to Top