ಬಂಟ್ವಾಳ, ಡಿಸೆಂಬರ್ 16, 2022 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಘಟಕದಿಂದ ದೀಪಾವಳಿ ಪ್ರಯುಕ್ತ ಗೋಪೂಜೆ, ಈದ್ ಮಿಲಾದ್ ಪ್ರಯುಕ್ತ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮಗಳ ಬಳಿಕ ಇದೀಗ ಕ್ರಿಸ್ತ ಜಯಂತಿ ಪ್ರಯುಕ್ತ ಡಿಸೆಂಬರ್ 20 ರಂದು ಸಂಜೆ 4.30ಕ್ಕೆ ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಕಾರ್ಯಕ್ರಮವು ಮೊಡಂಕಾಪು ಚರ್ಚ್ ಮೈದಾನದಲ್ಲಿ ನಡೆಯಿಲಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ನೇತೃತ್ವದ ಕ್ರಿಸ್ಮಸ್ ಸೌಹಾರ್ದ ಸಮಿತಿ ಹಾಗೂ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮುಂದಾಳುತ್ವದಲ್ಲಿ ಈ ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಕಾರ್ಯಕ್ರಮವು ನಡೆಯಲಿದ್ದು, ಬಂಟ್ವಾಳ ವಲಯದ ಪ್ರಧಾನ ಧರ್ಮಗುರು ವಲೇರಿಯನ್ ಡಿ ಸೋಜ ಕಾರ್ಯಕ್ರಮ ಉದ್ಘಾಟಿಸುವರು. ಕಿನ್ನಿಗೋಳಿ ಚರ್ಚಿನ ಧರ್ಮಗುರು ಪಾವುಸ್ತಿನ್ ಲೋಬೋ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಶಾಂತಿಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಞÂ ಅವರು ಸೌಹಾರ್ದ ಸಂದೇಶ ನೀಡುವರು. ಮಾಜಿ ಸಚಿವ ಬಿ ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 3.30 ರಿಂದ ಬಿ ಸಿ ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಕ್ರಿಸ್ತ ಜಯಂತಿ ಸ್ಥಬ್ದ ಚಿತ್ರ, ಸಾಂತಾಕ್ಲಾಸ್ ಹಾಗೂ ಆಕರ್ಷಣೆಯ ಸೌಹಾರ್ದ ಬೈಕ್ ರ್ಯಾಲಿ ನಡೆಯಲಿದ್ದು, ಸಂಭ್ರಮದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಕ್ರಿಸ್ಮಸ್ ಸೌಹಾರ್ದ ಸಮಿತಿಯ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಲವೀನಾ ವಿಲ್ಮಾ ಮೊರಾಸ್ ಮತ್ತು ಜಯಂತಿ ವಿ ಪೂಜಾರಿ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment