ಧರ್ಮಸ್ಥಳ, ಡಿಸೆಂಬರ್ 16, 2022 (ಕರಾವಳಿ ಟೈಮ್ಸ್) : ಧರ್ಮಸ್ಥಳದ ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ಕಳೆದ ಜೂನ್ 30 ರಂದು ಬಂದಿದ್ದ ಬೆಂಗಳೂರು ನಿವಾಸಿ ಶ್ರೀಮತಿ ಹೇಮಾ ಅವರ 2 ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6 ಸಾವಿರ ರೂಪಾಯಿ ನಗದು ಹಣ ಕಳ್ಳತನಗೈದ ಪ್ರಕರಣ ಬೇಧಿಸಿದ ಧರ್ಮಸ್ಥಳ ಪೊಲೀಸರು ಆರೋಪಿ ಬೆಂಗಳೂರು ನಿವಾಸಿ ವರ್ಷಾ ಎನ್ (26) ಎಂಬಾತನನ್ನು ಬೆಂಗಳೂರಿನಲ್ಲಿ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯಿಂದ 2.50 ಲಕ್ಷ ರೂಪಾಯಿ ಮೌಲ್ಯದ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment