ಬಂಟ್ವಾಳ, ಡಿಸೆಂಬರ್ 15, 2022 (ಕರಾವಳಿ ಟೈಮ್ಸ್) : ಮೇಸ್ತ್ರಿ ಕಾರ್ಮಿಕಗೆ ತಂಡವೊಂದು ಬಸ್ಸಿನಿಂದ ಇಳಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಗುಂಪು ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ತಲಪಾಡಿ ಸಾರಾ ಫ್ಲಾಟ್ ನಿವಾಸಿ ದಿವಂಗತ ಕುಂಞÂಮೋನು ಅವರ ಪುತ್ರ ಇಸಾಕ್ (43) ಅವರೇ ಗುಂಪಿನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೇಸ್ತ್ರಿ ಕಾರ್ಮಿಕ.
ಇಸಾಕ್ ಅವರು ಮೂಡಬಿದ್ರೆ ಗಂಟಲ್‍ಕಟ್ಟೆಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಬೆಳಿಗ್ಗೆ ಬಿ ಸಿ ರೋಡಿನಿಂದ ಮಹಾಗಣೇಶ್ ಬಸ್ಸಿನಲ್ಲಿ ಮೂಡಬಿದ್ರೆಗೆ ಪ್ರಯಾಣಿಸುತ್ತಿದ್ದು 2 ದಿನಗಳ ಹಿಂದೆ ಬೆಳಿಗ್ಗೆ ಬಿ ಸಿ ರೋಡಿನಿಂದ ಮೂಡಬಿದ್ರೆಗೆ ಹೋಗುತ್ತಿದ್ದ ಸಮಯ ಬಸ್ಸಿನಲ್ಲಿ ಪ್ರಯಾಣಿಕರು ಇದ್ದುದರಿಂದ ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿದ ಅವಳ ಬ್ಯಾಗನ್ನು ಹಿಡಿದುಕೊಂಡಿದ್ದರು. ಡಿ 14 ರಂದು ಬುಧವಾರ ಇಸಾಕ್ ಮೂಡಬಿದ್ರೆಯಿಂದ ಗಂಟಲ್‍ಕಟ್ಟೆಗೆ ಹೋಗಲು ಬಿ ಸಿ ರೋಡಿನಿಂದ ಬೆಳಿಗ್ಗೆ 7:25 ಗಂಟೆಗೆ ಮಹಾ ಗಣೇಶ್ ಬಸ್ಸಿನಲ್ಲಿ ಹೋಗುತ್ತಾ ಬಸ್ಸು ಬೆಳಿಗ್ಗೆ 8:10 ಗಂಟೆಗೆ ಕುದ್ಕೋಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಸ್ಸಿನಲ್ಲಿ ಕುಳಿತುಕೊಂಡಿದ್ದ ಒಬ್ಬಾತನು ಇಸಾಕ್ ಅವರು ಕುಳಿತಿದ್ದಲ್ಲಿಗೆ ಬಂದು ರಂಡೆ ಮಗ, ನೀನು ಬಸ್ಸಿನಿಂದ ಇಳಿ ಬಸ್ಸಿನಲ್ಲಿ ಪ್ರಯಾಣಿಸುವ ಹುಡಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಹಿಡಿದು ಬಸ್ಸಿನಿಂದ ಹೊರಗೆ ಕಳುಹಿಸಲು ಪ್ರಯತ್ನಿಸಿದ್ದು ಆಗ ಬಸ್ಸು ನಿಂತಾಗ ಇಬ್ಬರು ಬಸ್ಸಿಗೆ ಹತ್ತಿ ಬಸ್ಸಿನಿಂದ ಆ ಮೂವರು ಸೇರಿ ಇಸಾಕ್ ಅವರಿಗೆ “ಬೇವರ್ಸಿ, ರಂಡೆ ಮಗ ಹುಡುಗಿಯರಿಗೆ ಬಾರಿ ತೊಂದರೆ ಕೊಡುತ್ತೀಯಾ” ಎಂದು ಹಲ್ಲೆ ನಡೆಸಿ ರಿಕ್ಷಾ ಪಾರ್ಕಿನಿಂದ ಬಂದ ರಿಕ್ಷಾದಲ್ಲಿ ಕುಳ್ಳಿರಿಸಿ ರಾಯಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಒಂದು ಗೋಳಿ ಮರದ ಕೆಳಗೆ ರಿಕ್ಷಾವನ್ನು ನಿಲ್ಲಿಸಿ ಕಾಡು ಮರದ ದೊಣ್ಣೆಯನ್ನು ತೆಗೆದು ಮೂವರು ಸೇರಿ ಬೆನ್ನಿಗೆ, ಎಡ ಕೈಗೆ, ಭುಜಕ್ಕೆ, ಎರಡೂ ಕಾಲಿನ ತೊಡೆಗೆ, ಹೊಟ್ಟೆಗೆ ಹೊಡೆದು, ಬೇವಾರ್ಸಿ ರಂಡೆ ಮಗ ನೀನು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಇನ್ನು ಮುಂದೆ ಈ ಬಸ್ಸಿನಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.
ಆರೋಪಿಗಳ ಪೈಕಿ ಒಬ್ಬಾತ ಇಸಾಕ್ ಅವರ ಕಣ್ಣಿಗೆ ಗುದ್ದಿ ಬೈದಿದ್ದು ಜನರು ಸೇರುವುದನ್ನು ಕಂಡು ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ. ಗುಂಪು ಹಲ್ಲೆಯಿಂದ ಗಂಭೀರ ಗಾಯಗೊಂಡ ಇಸಾಕ್ ಔಷಧಿ ಪಡೆದು ಮನೆಗೆ ಬಂದಿದ್ದು, ಬಳಿಕ ರಾತ್ರಿ ನೋವು ಜಾಸ್ತಿಯಾದುದರಿಂದ ಗುರುವಾರ ಬೆಳಿಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ 3 ಮಂದಿ ಅಪರಿಚಿತ ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 93/2022 ಕಲಂ 504, 506, 323, 324, 342, 352 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಮನೋಹರ್, ಚೇತನ್ ಹಾಗೂ ಕಿಶೋರ್ ಎಂಬವರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೋಮು ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಮೇರೆ ಮೀರಿದ್ದು, ಚುನಾವಣಾ ಸಮಯ ಹತ್ತಿರ ಬರುತ್ತಿರುವುದರಿಂದ ದುಷ್ಕರ್ಮಿಗಳು ಮತ್ತೆ ಹೆಡೆ ಬಿಚ್ಚಿ ಸಮಯ ಸಾಧಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಹೆಡೆಮುರಿ ಕಟ್ಟುವಂತೆ ಆಗ್ರಹಿಸಿದ್ದಾರೆ.
0 comments:
Post a Comment