ಬಂಟ್ವಾಳ, ಡಿಸೆಂಬರ್ 21, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೇಂದ್ರ ಪಟ್ಟಣ ಬಿ ಸಿ ರೋಡಿನ ಇಲ್ಯಾಸ್ ಮಾಲಕತ್ವದ ನಿಧಾ ಕಮ್ಯುನಿಕೇಶನ್ಸ್ ಕಚೇರಿಯಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ತಾಲೂಕು ತಹಶೀಲ್ದಾರ್ ಡಾ ಸ್ಮಿತಾರಾಮು ಅವರು ಬುಧವಾರ (ಡಿ 21) ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ರಾಜ್ಯ ಸರಕಾರ ಎಲ್ಲಾ ಸರಕಾರೀ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಗ್ರಾಮ ಒನ್ ಹಾಗೂ ಪಟ್ಟಣ ಪ್ರದೇಶದಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಸರಕಾರಿ ಕಾರ್ಯಕ್ರಮದ ಅಂಗವಾಗಿ ಇದೀಗ ಬಿ ಸಿ ರೋಡಿನಲ್ಲಿ ಇಲ್ಯಾಸ್ ಅವರು ಏಜೆನ್ಸಿ ಮೂಲಕ ಜನರಿಗೆ ಸೇವೆ ನೀಡಲು ಸಜ್ಹಾಗಿದ್ದು, ಅವರ ಸೇವಾ ಕೇಂದ್ರಕ್ಕೆ ಶುಭವಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಮಾತನಾಡಿ, ಕರ್ನಾಟಕ ಒನ್ ಜನ ಸೇವಾ ಕೇಂದ್ರದ ಮೂಲಕ ಜನರಿಗೆ ನಗುಮುಖದ ಹಾಗೂ ಜನಸ್ನೇಹಿ ಸೇವೆ ನೀಡಲು ಯೋಜನೆಯ ಏಜೆನ್ಸಿಗಳು ಬದ್ದರಾಗಿ ಕಾರ್ಯನಿರ್ವಹಿಸಬೇಕು ಎಂದು ಶುಭ ಹಾರೈಸಿದರು.
ಪತ್ರಕರ್ತರಾದ ರತ್ನದೇವ ಪೂಂಜಾಲಕಟ್ಟೆ, ಸತೀಶ್ ಕಾರ್ತಿಕ್ ಬಿ ಸಿ ರೋಡು, ಪ್ರಮುಖರಾದ ಮುಹಮ್ಮದ್ ನಂದಾವರ, ಉಮ್ಮರಬ್ಬ ಕಕ್ಕೆಪದವು, ಮುಹಮ್ಮದ್ ಸಜಿಪ ಮೊದಲಾದವರು ಭಾಗವಹಿಸಿದ್ದರು.
ನಿಧಾ ಕಮ್ಯೂನಿಕೇಶನ್ಸ್ ಮಾಲಕ ಇಲ್ಯಾಸ್ ಬಿ ಸಿ ರೋಡು ಸ್ವಾಗತಿಸಿ, ಸಿಬ್ಬಂದಿ ಮೇಬಲ್ ವಂದಿಸಿದರು. ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಪತ್ರಕರ್ತ ರತ್ನದೇವ್ ಪೂಂಜಾಲಕಟ್ಟೆ ಅವರು ಬಿ ಸಿ ರೋಡು ಪೊಲೀಸ್ ಠಾಣಾ ರಸ್ತೆಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ ಸಹಿತ ನಗರದ ವಿವಿಧ ಆಯಕಟ್ಟಿನ ಪ್ರದೇಶದಲ್ಲಿ ಅನಧಿಕೃತ ಪಾರ್ಕಿಂಗ್ ವ್ಯವಸ್ಥೆಗೆ ಕಡಿವಾಣ ಹಾಕಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಕಲ್ಪಿಸಿ ನಗರ ಸೌಂದರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ತಹಶೀಲ್ದಾರ್ ಹಾಗೂ ಪುರಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
0 comments:
Post a Comment