ಬಂಟ್ವಾಳ, ಡಿಸೆಂಬರ್ 21, 2022 (ಕರಾವಳಿ ಟೈಮ್ಸ್) : ಯುವ ಸಮುದಾಯ ಧಾರ್ಮಿಕ ಶ್ರದ್ದಾ ಭಕ್ತಿಯಿಂದ ಸಕಾರಾತ್ಮಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ದುಶ್ಚಟಗಳಿಂದ ದೂರವಾಗಿ ಸುಸಂಸ್ಕøತ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಹಮ್ಮದ್ ಇರ್ಷಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಹೇಳಿದರು.
ತಾಲೂಕಿನ ಗಡಿಯಾರ ಸಮೀಪದ ಜೋಗಿಬೆಟ್ಟು ಇತ್ತಿಫಾಕ್ ಮೀಲಾದ್ ಕಮಿಟಿಯ ಆಶ್ರಯದಲ್ಲಿ ನಡೆದ ಬುರ್‍ದಾ ಮಜ್ಲಿಸ್ ಹಾಗೂ ನಅತೇ ಶರೀಫ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿಯಾರ ಜುಮಾ ಮಸೀದಿ ಖತೀಬ್ ಉಮರ್ ಫೈಝಿ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಜಿ ಮುಹಮ್ಮದ್ ಕುಕ್ಕುವಳ್ಳಿ, ರಿಯಾಝ್ ಕಲ್ಲಾಜೆ, ಯೂನುಸ್ ಸಅದಿ, ರಶೀದ್ ಸಖಾಫಿ, ಹಮೀದ್ ದಾರಿಮಿ, ತ್ವಯ್ಯಿಬ್ ಫೈಝಿ, ಶಂಶೀರ್ ಬುಡೋಳಿ, ಶಾಹುಲ್ ಹಮೀದ್, ಅಲಿ ಮದನಿ ಜೋಗಿಬೆಟ್ಟು, ಅಬ್ದುಲ್ ರಶೀದ್, ನಝೀರ್ ಪೆರ್ಲಾಪು, ಶಂಶುದ್ದೀನ್ ಪಟಿಲ, ಬಾತಿಷಾ ಪಾಟ್ರಕೋಡಿ, ಮಹಮ್ಮದ್ ಶರೀಫ್, ಝಕರಿಯ ದಾರಿಮಿ ಕಡಂಬು, ಅಬ್ದುಲ್ ಮಜೀದ್ ದಾರಿಮಿ ಏನಾಜೆ, ಸಿರಾಜುದ್ದೀನ್ ಮದನಿ ಗಡಿಯಾರ, ಎಂ ಆರ್ ರಫೀಕ್, ಫಾರೂಕ್ ಸತ್ತಿಕಲ್ಲು, ಮುಹಮ್ಮದ್ ಸರೋಳಿ, ಫಾರೂಕ್ ಸತ್ತಿಕಲ್ಲು, ರಫೀಕ್ ಕೆಮ್ಮಾನ್ ಭಾಗವಹಿಸಿದ್ದರು.
ಬಳಿಕ ಶುಕೂರ್ ಇರ್ಫಾನಿ, ಶಾಹಿನ್ ಬಾಬು, ರವೂಫ್ ಅಝ್-ಹರಿ ತಂಡದಿಂದ ಬುರ್‍ದಾ ಆಲಾಪಣೆ ಹಾಗೂ ಮುಈನುದ್ದೀನ್ ಖಾದ್ರಿ ಬೆಂಗಳೂರು ನೇತೃತ್ವದಲ್ಲಿ ನಅತೇ ಷರೀಫ್ ಕಾರ್ಯಕ್ರಮ ನಡೆಯಿತು.
ಮೀಲಾದ್ ಕಮಿಟಿ ಗೌರವಾಧ್ಯಕ್ಷ ಅಬ್ದುಲ್ ಸಲಾಂ ಬಾಖವಿ ಸ್ವಾಗತಿಸಿ, ಹಾರಿಸ್ ಮದನಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment