ಮಂಗಳೂರು, ಡಿಸೆಂಬರ್ 20, 2022 (ಕರಾವಳಿ ಟೈಮ್ಸ್) : ಅಂಚೆ ಉಳಿತಾಯ ಖಾತೆಗಳಿಗೆ ಮಾರ್ಚ್ 31 ರೊಳಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.
ಅಂಚೆ ಕಛೇರಿಗಳಲ್ಲಿ ಉಳಿತಾಯ ಖಾತೆ ಸೌಲಭ್ಯವಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಸಾರ್ವಜನಿಕರಿಗೆ ಇದು ಅನೇಕ ವಿಧದಲ್ಲಿ ಸಹಕಾರಿಯಾಗಿದೆ. ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳೂ ಅಂಚೆ ಉಳಿತಾಯ ಖಾತೆಯಲ್ಲೂ ಲಭ್ಯವಿದೆ. ಅಂಚೆ ಉಳಿತಾಯ ಖಾತೆಯನ್ನು ಹೊಸದಾಗಿ ತೆರೆಯಲು, ಮೊಬೈಲ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ. ಅಲ್ಲದೇ ಈಗಾಗಲೇ ಅಂಚೆ ಕಛೇರಿಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು 2023ರ ಮಾರ್ಚ್ 31ರೊಳಗೆ ತಮ್ಮ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಾಗಿದೆ.
ಮಾರ್ಚ್ 31ರೊಳಗೆ ಅಂಚೆ ಉಳಿತಾಯ ಖಾತೆಗೆ ಮೊಬೈಲ್ ಸಂಖ್ಯೆ ಜೋಡಿಸದೆ ಇದ್ದಲ್ಲಿ ಎಪ್ರಿಲ್ 1ರಿಂದ ಈ ಖಾತೆಯಲ್ಲಿ ಮೊಬೈಲ್ ಸಂಖ್ಯೆ ಜೋಡಿಸುವವರೆಗೆ ಯಾವುದೇ ವ್ಯವಹಾರ ಮಾಡಲಾಗುವುದಿಲ್ಲ.
ಖಾತೆದಾರರು ತಮ್ಮ ಉಳಿತಾಯ ಖಾತೆ ಹೊಂದಿರುವ ಅಂಚೆ ಕಛೇರಿಗೆ ಅಥವಾ ಸಮೀಪದ ಅಂಚೆ ಕಛೇರಿಗೆ ತೆರಳಿ ಒಂದು ಸರಳವಾದ ಫಾರ್ಮನ್ನು ತುಂಬಿಸಿ ನೀಡಿದಲ್ಲಿ ತಕ್ಷಣ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸಲಾಗುವುದು.
ಖಾತೆಗೆ ಒಮ್ಮೆ ಮೊಬೈಲ್ ಸಂಖ್ಯೆ ಜೋಡಣಿಗೊಂಡ ನಂತರ ಖಾತೆಯಲ್ಲಿ ಹಣ ತೆಗೆಯುವ ಅಥವಾ ಹಣ ಜಮಾ ಮಾಡುವ ಯಾವುದೇ ವ್ಯವಹಾರ ಮಾಡಿದರೂ ಮೊಬೈಲ್ ಸಂಖ್ಯೆ ಎಸ್ ಎಂ ಎಸ್ ಬರುತ್ತದೆ. ಇದು ವ್ಯವಹಾರವನ್ನು ಖಾತ್ರಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment