ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ವಕೀಲರಿಂದ ಮುತ್ತಿಗೆ - Karavali Times ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ವಕೀಲರಿಂದ ಮುತ್ತಿಗೆ - Karavali Times

728x90

27 December 2022

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ವಕೀಲರಿಂದ ಮುತ್ತಿಗೆ

 ಬೆಳಗಾವಿ, ಡಿಸೆಂಬರ್ 27, 2022 (ಕರಾವಳಿ ಟೈಮ್ಸ್) : ವಕೀಲರ ರಕ್ಷಣಾ ಕಾಯ್ದೆಯನ್ನು ಅಧಿವೇಶನದಲ್ಲಿ ಜಾರಿ ಮಾಡುವಂತೆ ಆಗ್ರಹಿಸಿ ಮಂಗಳವಾರ (ಡಿ 27) ವಕೀಲರಿಂದ ಬೆಳಗಾವಿ ಚಲೋ ಕಾರ್ಯಕ್ರಮ ನಡೆಯಿತು. ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ನಂತರ ಸುವರ್ಣ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ನಡೆಯಿತು. ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ವಕೀಲರು ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸುವರ್ಣ ಸೌಧಕ್ಕೆ ತೆರಳುವ ರಸ್ತೆಗಳಿಗೆ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದರು. 

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅದ್ಯಕ್ಷ ವಿಶಾಲ್ ರಘು, ಬೆಂಗಳೂರು ವಕೀಲರ ಸಂಘದ ಅದ್ಯಕ್ಷ ವಿವೇಕ್ ರೆಡ್ಡಿ,  ಮಾಜಿ ಅದ್ಯಕ್ಷ ಎ ಪಿ ರಂಗನಾಥ್, ಕೆ ಎಸ್ ಬಿ ಸಿ ಸದಸ್ಯ ಕೋಟೇಶ್ವರ ರಾವ್,  ಅಖಿಲ ಭಾರತ ವಕೀಲರ ಸಂಘದ ನಾಯಕರಾದ ಕೆ ಎಚ್ ಪಾಟೀಲ್, ಬಿ ವಿ ಕೋರಿಮಠ್, ಸತೀಶ್ ಕೋಲಾರ, ವಿನಾಯಕ್ ಕಿರುಬರ್, ಅನ್ಸಾದ್ ಪಾಲ್ಯ, ದ ಕ ಜಿಲ್ಲಾ ಕಾನೂನು ವೇದಿಕೆಯ ಬಂಟ್ವಾಳ ತಾಲೂಕು ಅದ್ಯಕ್ಷ ಸುರೇಶ್ ಪೂಜಾರಿ, ಮಂಗಳೂರು ವಕೀಲರ ಸಂಘದ ಅದ್ಯಕ್ಷ ಪೃಥ್ವಿರಾಜ್ ರೈ, ಕಾರ್ಯದರ್ಶಿ ಶ್ರೀಧರ್ ಎನ್ಮಕಜೆ, ಪ್ರಮುಖರಾದ ವೀರೇಂದ್ರ ಸಿದ್ದಕಟ್ಟೆ, ಮಲಿಕ್ ಅನ್ಸಾರ್ ಕರಾಯ, ಮೋಹನ್ ಕುಮಾರ್ ಕಡೇಶ್ವಾಲ್ಯ, ತುಳಸೀದಾಸ್ ವಿಟ್ಲ, ಎ ಪಿ ಮೊಂತೆರೋ, ಡೇನಿಯಲ್ ಮೂಲ್ಕಿ, ಕುಲದೀಪ್ ಶೆಟ್ಟಿ, ಮಹಮ್ಮದ್ ಮುಂಝಿರ್, ಮಹಮ್ಮದ್ ಗಝಾಲಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ವಕೀಲರಿಂದ ಮುತ್ತಿಗೆ Rating: 5 Reviewed By: karavali Times
Scroll to Top