ಸಾಲೆತ್ತೂರು : ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಲಾರಿ ಹಠಾತ್ ಬೆಂಕಿಗಾಹುತಿ - Karavali Times ಸಾಲೆತ್ತೂರು : ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಲಾರಿ ಹಠಾತ್ ಬೆಂಕಿಗಾಹುತಿ - Karavali Times

728x90

21 February 2023

ಸಾಲೆತ್ತೂರು : ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಲಾರಿ ಹಠಾತ್ ಬೆಂಕಿಗಾಹುತಿ

ಬಂಟ್ವಾಳ, ಫೆಬ್ರವರಿ 21, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಾಲೆತ್ತೂರು ಸಮೀಪದ ಮೆದು ಎಂಬಲ್ಲಿ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಆತಂಕಕಾರಿ ಘಟನೆ ಸೋಮವಾರ ರಾತ್ರಿ ವೇಳೆ ನಡೆದಿದೆ. ಬೆಂಕಿ ಅವಘಡದಿಂದಾಗಿ ಲಾರಿ ಭಾಗಶಃ ಸುಟ್ಟು ಕರಕಲಾಗಿದೆ.

ಪೆಟ್ರೋಲ್ ಬಂಕಿನ ಎದುರು ಈ ಘಟನೆ ನಡೆದಿದ್ದರೂ ಪೆಟ್ರೋಲ್ ಬಂಕಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಸ್ಥಳೀಯರು ಸಕಾಲಿಕವಾಗಿ ಸ್ಪಂದಿಸಿದ್ದರಿಂದ, ಅಗ್ನಿ ಶಾಮಕ ಸಿಬ್ಬಂದಿಗಳೂ ಕೂಡಾ ತಕ್ಷಣ ಸ್ಥಳಕ್ಕಾಗಮಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿದ್ದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಘಟನೆಯಿಂದ ಲಾರಿ ಮಾಲಕಗೆ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಾಲೆತ್ತೂರು : ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಲಾರಿ ಹಠಾತ್ ಬೆಂಕಿಗಾಹುತಿ Rating: 5 Reviewed By: karavali Times
Scroll to Top