ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ಪರೀಕ್ಷೆ : ಮಂಗಳೂರು ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ 7 ರ್ಯಾಂಕ್ - Karavali Times ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ಪರೀಕ್ಷೆ : ಮಂಗಳೂರು ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ 7 ರ್ಯಾಂಕ್ - Karavali Times

728x90

13 March 2023

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ಪರೀಕ್ಷೆ : ಮಂಗಳೂರು ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ 7 ರ್ಯಾಂಕ್

ಮಂಗಳೂರು, ಮಾರ್ಚ್ 14, 2023 (ಕರಾವಳಿ ಟೈಮ್ಸ್) : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ ಎಂ ಫಾರ್ಮಾ, ಫಾರ್ಮಾ ಡಿ ಮತ್ತು ಬಿ ಫಾರ್ಮಾ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀದೇವಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. 

ಎಂ ಫಾರ್ಮಾ ಪರೀಕ್ಷೆಯಲ್ಲಿ 2 ರ್ಯಾಂಕ್, ಫಾರ್ಮಾ ಡಿ ಪರೀಕ್ಷೆಯಲ್ಲಿ 3 ರ್ಯಾಂಕ್ ಹಾಗೂ ಬಿ ಫಾರ್ಮಾ ಪರೀಕ್ಷೆಯಲ್ಲಿ 2 ರ್ಯಾಂಕ್ ಲಭಿಸಿದೆ.

ಒಟ್ಟು 2 ವರ್ಷದ ಎಂ ಫಾರ್ಮಾ ಫಾರ್ಮಾಕಾಲಜಿ ವಿಭಾಗದಲ್ಲಿ ಪ್ರವೀಣ್ ರಾಜ್ 2ನೇ ರ್ಯಾಂಕ್ ಹಾಗೂ ಸೂರಜ್ 3ನೇ ರ್ಯಾಂಕ್, ಫಾರ್ಮಾ ಡಿ (ಪೋಸ್ಟ್ ಬ್ಯಾಕಲರೇಟ್) ವಿದ್ಯಾರ್ಥಿನಿ ಪ್ರಿಯಾಂಕ ಒಟ್ಟು 2 ವರ್ಷದ ಫಾರ್ಮಾ ಡಿ ಪದವಿಯಲ್ಲಿ 8ನೇ ರ್ಯಾಂಕ್, 1ನೇ ವರ್ಷದ ಪದವಿಯಲ್ಲಿ 4ನೇ ರ್ಯಾಂಕ್, 2ನೇ ವರ್ಷದ ಪದವಿ ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಥಮ ವರ್ಷದ ಬಿ ಫಾರ್ಮಾ ಪದವಿ ಪರೀಕ್ಷೆಯಲ್ಲಿ ಅನಿಶಾ 9ನೇ ರ್ಯಾಂಕ್, ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಸಿರಾಜುನ್ನಿಸಾ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ಪರೀಕ್ಷೆ : ಮಂಗಳೂರು ಶ್ರೀ ದೇವಿ ಫಾರ್ಮಸಿ ಕಾಲೇಜಿಗೆ 7 ರ್ಯಾಂಕ್ Rating: 5 Reviewed By: karavali Times
Scroll to Top