ಸುಳ್ಯ, ಮಾರ್ಚ್ 26, 2023 (ಕರಾವಳಿ ಟೈಮ್ಸ್) : ಸುಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಕಸಬಾ ಗ್ರಾಮದ ಗುರುಂಪು ಎಂಬಲ್ಲಿ ತಡೆ ಗೋಡೆ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೆ ಮಣ್ಣಿನ ಗುಡ್ಡ ಕುಸಿದು ಬಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ (ಮಾ 25) ನಡೆದಿದೆ.
ಮೃತ ಕಾರ್ಮಿಕರನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕು, ಹೀರೇವಡ್ಡಟ್ಟಿ ನಿವಾಸಿ ಸೋಮಶೇಖರ ರೆಡ್ಡಿ ಅವರ ಪತ್ನಿ ಶಾಂತವ್ವ ಹಾಗೂ ಚಂದ್ರಪ್ಪ ಎಂದು ಹೆಸರಿಸಲಾಗಿದೆ.
ಕಾರ್ಮಿಕರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗುರುಂಪು ಎಂಬಲ್ಲಿರುವ ಅಬೂಬಕ್ಕರ್ ಎಂಬವರ ಮನೆಯ ಹಿಂಬದಿಯ ತಡೆಗೋಡೆ ನಿರ್ಮಾಣದ ಕೆಲಸ ಮಾಡಿಕೊಂಡಿದ್ದ ವೇಳೆ ಮಧ್ಯಾಹ್ನ ಸುಮಾರು 12.35 ಗಂಟೆ ಸಮಯಕ್ಕೆ, ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಮಣ್ಣಿನ ಬರೆ ಕುಸಿದು ಕಾರ್ಮಿಕರ ಮೇಲೆ ಮಣ್ಣು ಬಿದ್ದು ಮಣ್ಣಿನಡಿಯಲ್ಲಿ ಸಿಲುಕಿಕೊಂಡು ಈ ಅವಘಡ ಸಂಭವಿಸಿದೆ. ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸೇರಿ ಅವರನ್ನು ಮಣ್ಣಿನಡಿಯಿಂದ ಹೊರಗೆಳೆದು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮೃತ ಸೋಮಶೇಖರ ರೆಡ್ಡಿ ಅವರ ಸಹೋದರ ಮಾಲತೇಶ್ ರೆಡ್ಡಿ ಸುಳ್ಯ ಠಾಣೆಯಲ್ಲಿ ನೀಡಿದ ದೂರಿನಂತೆ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ಇಲ್ಲದೆ ಕೆಲಸ ಮಾಡಿಸಿದ್ದ ಆರೋಪದಲ್ಲಿ ಮನೆಯ ಮಾಲೀಕ ಅಬೂಬಕ್ಕರ್, ಮೇಸ್ತ್ರಿ ನಾಗರಾಜ್, ಇಂಜಿನಿಯರ್ ವಿಜಯಕುಮಾರ್ ಅವರ ವಿರುದ್ದ ಅಪರಾಧ ಕ್ರಮಾಂಕ 30/2023 ಕಲಂ 304(ಎ) ಐಪಿಸಿರಂತೆ ಪ್ರಕರಣ ದಾಖಲಾಗಿದೆ.

0 comments:
Post a Comment