ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ಘೋಷಿತ ಗ್ಯಾರಂಟಿಗಳೂ ಜಾರಿಯಾಗುವುದು ಖಚಿತ, ಮಾತಿಗೆ ತಪ್ಪುವ ಜಾಯಮಾನವೇ ಕಾಂಗ್ರೆಸ್ಸಿಗಿಲ್ಲ : ರಮಾನಾಥ ರೈ - Karavali Times ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ಘೋಷಿತ ಗ್ಯಾರಂಟಿಗಳೂ ಜಾರಿಯಾಗುವುದು ಖಚಿತ, ಮಾತಿಗೆ ತಪ್ಪುವ ಜಾಯಮಾನವೇ ಕಾಂಗ್ರೆಸ್ಸಿಗಿಲ್ಲ : ರಮಾನಾಥ ರೈ - Karavali Times

728x90

28 April 2023

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ಘೋಷಿತ ಗ್ಯಾರಂಟಿಗಳೂ ಜಾರಿಯಾಗುವುದು ಖಚಿತ, ಮಾತಿಗೆ ತಪ್ಪುವ ಜಾಯಮಾನವೇ ಕಾಂಗ್ರೆಸ್ಸಿಗಿಲ್ಲ : ರಮಾನಾಥ ರೈ

ಬಂಟ್ವಾಳ, ಎಪ್ರಿಲ್ 28, 2023 (ಕರಾವಳಿ ಟೈಮ್ಸ್) : ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಒಂದು ವೇಳೆ ಈ ಯೋಜನೆಗಳನ್ನು ಜಾರಿಗೊಳಿಸದೆ ಇದ್ದಲ್ಲಿ ಮುಂದೆ ನಾನು ನಿಮ್ಮಲ್ಲಿ ಓಟ್ ಕೇಳಲು ಬರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಖಚಿತ ಭರವಸೆ ನೀಡಿದರು. 

ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಮತ್ತು ನಿಂಗಲ್ ಬಾಕಿಮಾರ್ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಪರಿಹಾರವಾಗಿ ಗೃಹಿಣಿಯರಿಗೆ 2 ಸಾವಿರ ರೂಪಾಯಿ ಗೃಹಲಕ್ಷ್ಮಿ ಯೋಜನೆಯ ಮೂಲಕ ನೀಡಲಾಗುತ್ತದೆ. 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಭತ್ಯೆ, ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕಾಂಗ್ರೆಸ್ ಗ್ಯಾರಂಟಿಗಳಾಗಿವೆ. ಇದೀಗ ಹೊಸದಾಗಿ ಇನ್ನೊಂದು ಯೋಜನೆ ನಮ್ಮ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಆ ಯೋಜನೆಯ ಪ್ರಕಾರ ಎಲ್ಲಾ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನೂ ಕಾಂಗ್ರೆಸ್ ನೀಡಲಿದೆ ಎಂದರು. 

ಬಂಟ್ವಾಳದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ಅಪಪ್ರಚಾರ, ಸುಳ್ಳು ವದಂತಿಗಳ ಮೂಲಕ ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ. ಆದರೆ ಕಳೆದ ಅವಧಿಯಲ್ಲಿ ಬೇರೊಬ್ಬರ ಆಡಳಿತ ನೋಡಿದ್ದೀರಿ. ಇಬ್ಬರ ಆಡಳಿತ ತುಲನೆ ಮಾಡಿ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲಿಸಿ ಎಂದು ರಮಾನಾಥ ರೈ ಇದೇ ವೇಳೆ ವಿನಂತಿಸಿದರು.

ಈ ಸಂದರ್ಭ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಅಶ್ವನಿ ಕುಮಾರ್ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪ್ರಮುಖರುಗಳಾದ ಪ್ರಕಾಶ್ ಕುಮಾರ್ ಜೈನ್, ಸುದರ್ಶನ್ ಜೈನ್, ಕೃಷ್ಣಪ್ಪ ಕುಲಾಲ್, ದೇವಪ್ಪ ಕುಲಾಲ್, ಅರುಣ್ ಐತಾಳ್, ಕೃಷ್ಣಪ್ಪ ಪೂಜಾರಿ, ವಿಶ್ವನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಸದಾನಂದ ಶೆಟ್ಟಿ, ಪದ್ಮಾವತಿ ಪೂಜಾರಿ, ಕೇಶವ ಪೂಜಾರಿ, ವಾಸು ಪೂಜಾರಿ, ವಿಶ್ವನಾಥ ಗೌಡ, ರಾಜೇಶ್ ಗೌಡ, ರವಿ ಆರ್ ಪೂಜಾರಿ, ವಿಕ್ಟರ್ ಪಾಯಸ್, ಜಯಪ್ರಕಾಶ್ ಮೊದಲಾದವರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ಘೋಷಿತ ಗ್ಯಾರಂಟಿಗಳೂ ಜಾರಿಯಾಗುವುದು ಖಚಿತ, ಮಾತಿಗೆ ತಪ್ಪುವ ಜಾಯಮಾನವೇ ಕಾಂಗ್ರೆಸ್ಸಿಗಿಲ್ಲ : ರಮಾನಾಥ ರೈ Rating: 5 Reviewed By: karavali Times
Scroll to Top