ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣಕ್ಕೆ ಮತದಾರರು ಬಲಿಯಾಗಬೇಡಿ : ಶಾಸಕ ರಾಜೇಶ್ ನಾಯಕ್ ಕರೆ - Karavali Times ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣಕ್ಕೆ ಮತದಾರರು ಬಲಿಯಾಗಬೇಡಿ : ಶಾಸಕ ರಾಜೇಶ್ ನಾಯಕ್ ಕರೆ - Karavali Times

728x90

28 April 2023

ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣಕ್ಕೆ ಮತದಾರರು ಬಲಿಯಾಗಬೇಡಿ : ಶಾಸಕ ರಾಜೇಶ್ ನಾಯಕ್ ಕರೆ

ಬಂಟ್ವಾಳ, ಎಪ್ರಿಲ್ 28, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣಕ್ಕೆ ಮತದಾರರು ಮತ್ತು ಕಾರ್ಯಕರ್ತರು ಬಲಿಯಾಗಬಾರದು ಎಂದಾದರೆ ಬಂಟ್ವಾಳದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಬೇಕು ಎಂದು ಬಂಟ್ವಾಳ ಶಾಸಕ, ಬಿಜೆಪಿ ಅಭ್ಯರ್ಥಿ ಯು ರಾಜೇಶ್ ನಾಯ್ಕ್ ಹೇಳಿದರು. 

ಮೂಡುಪಡುಕೋಡಿ ಮತ್ತು ಇರ್ವತ್ತೂರು ಗ್ರಾಮದಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲ ಅವಧಿಯಲ್ಲಿ ಬಂಟ್ವಾಳದಲ್ಲಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ, ಜೈಲಿಗಟ್ಟಿ ಅವರನ್ನು ಅಪರಾಧದ ಲೋಕಕ್ಕೆ ಕೊಂಡುಹೋದ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಅದೇ ಮಾದರಿಯಲ್ಲಿ ದ್ವೇಷಪೂರಿತ ರಾಜಕಾರಣ ಮಾಡುತ್ತದೆ ಎಂದವರು ಕಾರ್ಯಕರ್ತರನ್ನು ಎಚ್ಚರಿಸಿದರು.

ಬಿಜೆಪಿ ಅಧಿಕಾರದಲ್ಲಿರುವುದರಿಂದ ಜನತೆ ನೆಮ್ಮದಿಯಿಂದ ಇದ್ದಾರೆ. ಕಾರ್ಯಕರ್ತರು ಗೌರವದಿಂದ ತಲೆ ಎತ್ತಿ ನಡೆಯಲು ಅವಕಾಶ ಸಿಕ್ಕಿದೆ ಎಂದ ರಾಜೇಶ್ ನಾಯಕ್ ಪ್ರಥಮ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಜನರ ನಿರೀಕ್ಷೆಗೂ ಮೀರಿದ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಮತ್ತೊಮ್ಮೆ ಅವಕಾಶ ನೀಡಿ, ಬಂಟ್ವಾಳ ಕ್ಷೇತ್ರದಲ್ಲಿ ಅದ್ಬುತ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ಈ ಸಂದರ್ಭ ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಮಾನಾಥ ರಾಯಿ, ಮಂಡಲದ ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಪ್ರಮುಖರಾದ ರಶ್ಮಿತ್ ಶೆಟ್ಟಿ, ರಮೇಶ್ ಕುಡುಮೇರು, ಶುಭಕರ ಶೆಟ್ಟಿ, ಸುಂದರ ನಾಯ್ಕ್, ಶಂಕರ ಶೆಟ್ಟಿ ಬೆದ್ರಮಾರ್, ಸಂತೋಷ್ ಕುಂಟಜಾಲು, ದೇವಪ್ಪ ಶೆಟ್ಟಿ ಕುಂಟಜಾಲು, ಲೋಕೇಶ್ ನಾಯ್ಕ್ ಎರ್ಮೆನಾಡು, ರವಿಶಂಕರ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣಕ್ಕೆ ಮತದಾರರು ಬಲಿಯಾಗಬೇಡಿ : ಶಾಸಕ ರಾಜೇಶ್ ನಾಯಕ್ ಕರೆ Rating: 5 Reviewed By: karavali Times
Scroll to Top